ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಹಿಂಸೆ, ಗಲಭೆ, ಬಂದ್ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಪ್ರತ್ಯೇಕವಾದಿಗಳು ಇಂದು ಬಂದ್ ಗೆ ಕರೆ ನೀಡಿದ್ದು ಎಂದಿನ ಚಟುವಟಿಕೆ ಸ್ಥಬ್ಧವಾಗಿದೆ.
ಎಲ್ಲಾ ಅಂಗಡಿ-ಮುಂಗಟ್ಟುಗಳು, ಇತರ ವಾಣಿಜ್ಯ ಸಂಕೀರ್ಣಗಳನ್ನು ಮುಚ್ಚಿದ್ದು, ಸಾರ್ವಜನಿಕ ಸಾರಿಗೆಗಳು ರಸ್ತೆಗಿಳಿದಿಲ್ಲ.
ಕೆಲವು ದಿನಗಳ ಹಿಂದೆ ಪ್ರತ್ಯೇಕವಾದಿಗಳ ಜಂಟಿ ನಾಯಕರು 15 ದಿನಗಳವರೆಗೆ ಸಡಿಲಿಕೆ ಮತ್ತು ಬಂದ್ ಗೆ ಕರೆ ನೀಡಿದ್ದರು. ಅದರ ಪ್ರಕಾರ ಶುಕ್ರವಾರ ಮತ್ತು ಶನಿವಾರಗಳಂದು ಬಂದ್ ಆಚರಿಸಲಾಗುತ್ತದೆ.
ಪಶ್ಚಿಮ ಪಾಕಿಸ್ತಾನ ನಿರಾಶ್ರಿತರಿಗೆ ಸ್ಥಳ ಪ್ರಮಾಣ ಪತ್ರ ನೀಡುವ ರಾಜ್ಯ ಸರ್ಕಾರದ ಆದೇಶವನ್ನು ವಿರೋಧಿಸಿ ಶುಕ್ರವಾರ ಪ್ರಾರ್ಥನೆ ನಂತರ ಸಂಪೂರ್ಣ ಬಂದ್ ಗೆ ಪ್ರತ್ಯೇಕತಾವಾದಿ ಮುಖಂಡರು ಕರೆ ನೀಡಿದ್ದಾರೆ.