ದೇಶ

ಭೇಟಿಗೆ ನಿರಾಕರಣೆ: ಮೋದಿ ಬೆಂಗಾವಲು ಪಡೆ ಮೇಲೆ ಹೂವಿನ ಕುಂಡ ಎಸೆದ ಮಹಿಳೆ

Manjula VN

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ನಿರಾಕರಿಸಿದ್ದಕ್ಕೆ ತೀವ್ರವಾಗಿ ಕೋಪಗೊಂಡ ಮಹಿಳೆಯೊಬ್ಬರು ಮೋದಿಯವರ ಬೆಂಗಾವಲು ಪಡೆಯ ಮೇಲೆ ಹೂವಿನ ಕುಂಡವೊಂದನ್ನು ಎಸೆದಿರುವ ಘಟನೆಯೊಂದು ಬುಧವಾರ ನಡೆದಿದೆ.

ನವದೆಹಲಿಯಲ್ಲಿರುವ ತಮ್ಮ ಕಚೇರಿಯಿಂದ ಹೊರ ಬರುತ್ತಿದ್ದ ಮೋದಿಯವರನ್ನು ಕಂಡ ಮಹಿಳೆಯೊಬ್ಬರು ಅವರನ್ನು ಭೇಟಿ ಮಾಡಬೇಕೆಂದು ಹೇಳಿದ್ದಾರೆ. ಈ ವೇಳೆ ಮೋದಿಯವರ ವಿಶೇಷ ಬೆಂಗಾವಲು ಪಡೆ ಆಕೆಗೆ ತಡೆಯೊಡ್ಡಿದ್ದಾರೆ. ಅಲ್ಲದೆ, ಭೇಟಿಗೆ ನಿರಾಕರಿಸಿದ್ದಾರೆ. ಈ ವೇಳೆ ಕೆಂಡಾಮಂಡಲವಾಗಿರುವ ಮಹಿಳೆ ಘೋಷಣೆಗಳನ್ನು ಕೂಗುತ್ತ ಮೋದಿಯವರು ಹೋಗದಂತೆ ರಸ್ತ ಮಧ್ಯೆ ಕುಳಿತುಕೊಂಡಿದ್ದಾಳೆ. ಈ ವೇಳೆ ಭದ್ರತಾ ಸಿಬ್ಬಂದಿಗಳು ಜಾಗ ಬಿಡುವಂತೆ ಮನವಿ ಮಾಡಿದ್ದರೂ ಮಹಿಳೆ ಅವರ ಮಾತನ್ನು ಕೇಳದೆ ಕೂಗಾಡಲು ಆರಂಭಿಸಿದ್ದಾಳೆ.

ನಂತರ ರಸ್ತೆ ಜಾಗ ಬಿಡುವಂತೆ ಬಲವಂತ ಮಾಡಿದಾಗ ತೀವ್ರವಾಗಿ ಕೆಂಗಾಮಂಡಲವಾಗಿರುವ ಮಹಿಳೆ ಬೆಂಗಾವಲು ಪಡೆಯ ಮೇಲೆ ಸ್ಥಳದಲ್ಲಿದ್ದ ಹೂವಿನ ಕುಂಡಲಿಯೊಂದನ್ನು ಎಸೆದು ಸ್ಥಳದಲ್ಲಿ ಕೆಲವು ಗಂಟೆಗಳ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗುವಂತೆ ಮಾಡಿದ್ದಾರೆಂದು ತಿಳಿದುಬಂದಿದೆ. ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಆಕೆಯನ್ನು ಸಂಸತ್ತು ರಸ್ತೆಯಲ್ಲಿರುವ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲದೆ ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

SCROLL FOR NEXT