ಲಕ್ನೋ: ಬಿಜೆಪಿ ಹಾಗೂ ಸಮಾಜವಾದಿ ಪಕ್ಷಗಳು ಮುಸ್ಲಿಮರನ್ನು ಕಡೆಗಣಿಸುತ್ತಿವೆ ಎಂದು ಎಐಎಮ್ಐಎಮ್ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಆರೋಪಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಓವೈಸಿ , ಬಡವರು ಸಾಯುತ್ತಿದ್ದಾರೆ, ರೈತರು ಕಡು ಬಡವರಾಗಿ ಜೀವನ ನಡೆಸುತ್ತಿದ್ದಾರೆ. ಹೀಗಿದ್ದರೂ ಬಿಜೆಪಿ ಇಲ್ಲವೇ ಸಮಾಜವಾದಿ ಪಕ್ಷ ಗಳು ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಕಡು ಬಡವರಿಗೆ ಮೀಸಲಾತಿ ನೀಡುವುದಾಗಿ ಎಸ್ ಪಿ ಸರ್ಕಾರ ಘೋಷಿಸಿತ್ತು. ಆದರೆ ಇದುವರೆಗೂ ಆ ಭರವಸೆಯನ್ನು ಈಡೇರಿಸಿಲ್ಲ ಎಂದು ಹೇಳಿದರು. ಇಸಿಸ್ ಸಂಘಟನೆ ಮಾಡುತ್ತಿರುವ ಕೃತ್ಯಗಳನ್ನು ಖಂಡಿಸಿದ ಓವೈಸಿ, ಇಸಿಸ್ ನಿರ್ಮೂಲನೆಗಾಗಿ ಅಂಕಾರಾಷ್ಟ್ರೀಯ ಸಮುದಾಯ ಕೈಗೊಂಡಿರುವ ಸಮರಕ್ಕೆ ಪ್ರಧಾನಿ ನರೇಂದ್ರ ಮೋದಿ ಬೆಂಬಲ ನೀಡುತ್ತಿಲ್ಲ ಎಂದು ದೂರಿದರು.