ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸಿಯಾಚಿನ ಕಣಿವೆಯಲ್ಲಿ ಸಂಭವಿಸಿದ ಹಿಮಪಾತದಲ್ಲಿ ಭಾರತೀಯ ಯೋಧರು ಮೃತಪಟ್ಟಿದ್ದಾರೆಂದು ಶಂಕಿಸಲಾಗಿದೆ.
ಹಿಮಪಾತದಲ್ಲಿ ಸಿಕ್ಕಿ ಹಾಕಿಕೊಂಡಿರುವರು ಮದ್ರಾಸ್ ರೆಜಿಮೆಂಟ್ ಜೆಒಸಿ ಮತ್ತು 9 ಯೋಧರಾಗಿದ್ದು, ಭೂಮಟ್ಟದಿಂದ 19 ಸಾವಿರ ಅಡಿ ಎತ್ತರದಲ್ಲಿ ಪಹರೆ ನಡೆಸುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ಕರ್ನಲ್ ಎಸ್.ಡಿ ಗೋಸ್ವಾಮಿ ತಿಳಿಸಿದ್ದಾರೆ.
ವಾಯುಪಡೆ ಮತ್ತು ಸೇನಾಪಡೆ ಯೋಧರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಕಾಣೆಯಾಗಿರುವ ಯೋಧರು ಜೀವಂತವಾಗಿರುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ.