ಸಿಯಾಚಿನ್‌ (ಸಂಗ್ರಹ ಚಿತ್ರ) 
ದೇಶ

ಹಿಮಪಾತಕ್ಕೆ ಸಿಲುಕಿದ ಭಾರತಿಯ ಯೋಧರನ್ನು ಹೊರತೆಗೆಯಲು ನೆರವು ನೀಡಲು ಮುಂದಾಗಿದ್ದ ಪಾಕ್ ಸೇನೆ

ಹಿಮಸಮಾಧಿಯಾದ ಭಾರತೀಯ ಸೈನಿಕರನ್ನು ಹೊರತೆಗೆಯಲು ಸಹಾಯಹಸ್ತ ಚಾಚಿದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಧನ್ಯವಾದ ತಿಳಿಸಿದೆ.

ನವದೆಹಲಿ: ಅತ್ಯಂತ ಕಡಿಮೆ ತಾಪಮಾನ ಇರುವ ಯುದ್ಧಭೂಮಿ ಸಿಯಾಚಿನ್‌ನಲ್ಲಿ  ಹಿಮಸಮಾಧಿಯಾದ ಭಾರತೀಯ ಸೈನಿಕರನ್ನು ಹೊರತೆಗೆಯಲು ಸಹಾಯಹಸ್ತ ಚಾಚಿದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಧನ್ಯವಾದ ತಿಳಿಸಿದೆ.
ಹಿಮಪಾತಕ್ಕೆ ಸಿಲುಕಿ ಸಾವನ್ನಪ್ಪಿದ್ದ 10 ಯೋಧರ ಮೃತದೇಹಗಳನ್ನು ಹೊರತೆಗೆಯಲು ಪಾಕಿಸ್ತಾನ ಸೇನೆ ಸಹಾಯ ಮಾಡಲು ಮುಂದಾಗಿತ್ತು. ಆದರೆ ನಮ್ಮಲ್ಲಿ ಸೂಕ್ತ ಸೌಲಭ್ಯವಿರುವ ಹಿನ್ನೆಲೆಯಲ್ಲಿ ಪಾಕ್ ಸೇನೆಯ ಸಹಾಯದ ಅಗತ್ಯವಿಲ್ಲ, ಸಹಾಯ ಮಾಡಲು ಮುಂದಾದ ಪಾಕಿಸ್ತಾನ ಸೇನೆಗೆ ಧನ್ಯವಾದ ತಿಳಿಸಿದ್ದೇವೆ ಎಂದು ಸೇನಾ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ. 
ಪಾಕಿಸ್ತಾನ ಸೇನೆ ಸಹಾಯ ನೀಡಲು ಮುಂದಾಗಿದ್ದನ್ನು ಸ್ವಾಭಾವಿಕ ಸಂಗತಿ ಎಂದಿರುವ ಸೇನಾ ವಕ್ತಾರರು ಗಡಿ ನಿಯಂತ್ರಣ ರೇಖೆ ಬಳಿ ಇಂತಹ ಘಟನೆಗಳು ನಡೆದಾಗ ಸಹಾಯ ಮಾಡಲು ಮುಂದಾಗುವುದು ಸ್ವಾಭಾವಿಕ ಎಂದು ಹೇಳಿದ್ದಾರೆ.  
ಭಾರತೀಯ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಣಬೀರ್  ಸಿಂಗ್ ಅವರಿಗೆ ಕರೆ ಮಾಡಿದ್ದ ಪಾಕಿಸ್ತಾನ ಸೇನೆಯ ಸೇನಾ ಕಾರ್ಯಾಚರಣೆಗಳ ಪ್ರಧಾನ ನಿರ್ದೇಶಕ ಸಾಹಿರ್ ಶಂಶಾದ್ ಮಿರ್ಜಾ, ಸಿಯಾಚಿನ್ ನಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ಸಹಾಯ  ಮಾಡುವುದಾಗಿ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್