ನವದೆಹಲಿ: 23 ವರ್ಷಗಳ ಹಿಂದೆ 1992ರಲ್ಲಿ ಬಾಬರಿ ಮಸೀದಿ ಧ್ವಂಸದ ಜೊತೆಗೆ ಅದರ ಅಡಿಯಲ್ಲಿದ್ದ `ರಾಮಲಲ್ಲಾ’ ದೇವಾಲಯವೂ ಧ್ವಂಸವಾಗಿದ್ದು, ಇದನ್ನು ಧ್ವಂಸಗೊಳಿಸಿದ ಆರೋಪದ ಮೇಲೆ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರ ವಿರುದ್ಧ ಪ್ರಕರಣ ದಾಖಲಿಸಲು ಹಿಂದೂ ಮಹಾಸಭಾ ನಿರ್ಧರಿಸಿದೆ.
ಬಾಬ್ರಿ ಮಸೀದಿ ಧ್ವಂಸ ಮಾಡಿದ ಸಂದರ್ಭದಲ್ಲಿ ಅದರ ಅಡಿಯಲ್ಲಿದ್ದ ರಾಮಲಲ್ಲಾ ದೇವಾಲಯವೂ ಧ್ವಂಸವಾಗಿದೆ. ಇದಕ್ಕೆ ಕಾರಣರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಷಿ ಮತ್ತು ಉಮಾಭಾರತಿಯ ವಿರುದ್ಧ ಪ್ರಕರಣ ದಾಖಲಿಸಲು ಹಿಂದೂ ಮಹಾಸಭೆ ನಿರ್ಧರಿಸಿದೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಬಾಬರಿ ಮಸೀದಿ ಧ್ವಂಸವಾದ 23 ವರ್ಷಗಳ ನಂತರದಲ್ಲಿ ಮೊದಲ ಬಾರಿಗೆ ಹಿಂದೂ ಮಹಾಸಭಾ ರಾಮಲಲ್ಲಾ ದೇವಾಲಯದ ಧ್ವಂಸವೂ ಆಗಿದೆ ಎನ್ನುವ ಮೂಲಕ ಮತ್ತೆ ಪ್ರಕರಣವನ್ನು ಕೆದಕಿದೆ.
ಇದೇ ವೇಳೆ ಮುಸ್ಲಿಂ ಬಾಂಧವರ ಸಹಕಾರವಿಲ್ಲದೆ ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದೂ ಚಕ್ರಪಾಣಿ ಹೇಳಿದ್ದಾರೆ.