ಪುಣೆ: ಗುದ್ದೋಡು ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್ ನಿರ್ದೋಷಿ ಎಂದಿರುವ ಬಾಂಬೆ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿರುವ ಮಹಾರಾಷ್ಟ್ರ ಸರ್ಕಾರ, ಘಟನೆ ನಡೆದ ದಿನ ಸ್ವತಃ ಸಲ್ಮಾನ್ ಮದ್ಯಪಾನ ಮಾಡಿದ್ದರು ಮತ್ತು ಅವರೇ ಕಾರು ಚಾಲನೆ ಮಾಡುತ್ತಿದ್ದರು ಎಂದು ಹೇಳಿದೆ.
ರಾಜ್ಯ ಸರ್ಕಾರದ ಮೇಲ್ಮನವಿ ವಿಚಾರಣೆ ನಡೆಸುತ್ತಿರುವ ನ್ಯಾ.ಜೆಎಸ್ ಖೆಹರ್ ಮತ್ತು ನ್ಯಾ.ಸಿ ನಾಗಪ್ಪ ಅವರನ್ನೊಳಗೊಂಡ ಪೀಠದ ಮುಂದೆ ಅಟಾರ್ನಿ ಜನರಲ್ ಮುಕುಲ್ ರೋಹಟಗಿ, ಪ್ರಕರಣದ ಕುರಿತ ಹೈಕೋರ್ಟ್ ತೀರ್ಪು ಅಸ್ವಾಭಾವಿಕ, ಅಸಮಂಜಸ ಮತ್ತು ನ್ಯಾಯಕ್ಕೆ ಸಂಪೂರ್ಣ ವಿರುದ್ಧ ವಾದದ್ದು ಎಂದಿದ್ದಾರೆ.
ಸರ್ಕಾರದ ವಾದ ಆಲಿಸಿದ ಪೀಠ ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 12ಕ್ಕೆ ಮುಂದೂಡಿದೆ.