ನ್ಯಾಯಾಧೀಶರ ಮೇಲಿನ ಆರೋಪ ತನಿಖೆಗೆ ಹೊಸ ವ್ಯವಸ್ಥೆ 
ದೇಶ

ನ್ಯಾಯಾಧೀಶರ ಮೇಲಿನ ಆರೋಪ ತನಿಖೆಗೆ ಹೊಸ ವ್ಯವಸ್ಥೆ

ನ್ಯಾಯಾಧೀಶರ ವಿರುದ್ಧ ಕೇಳಿಬರುವ ಅನುಚಿತ ವರ್ತನೆ ಹಾಗೂ ಅಸಾಮರ್ಥ್ಯ ಆರೋಪಗಳ ಬಗ್ಗೆ ತನಿಖೆ ನಡೆಸಲು ಈಗಿರುವ ವ್ಯವಸ್ಥೆಯನ್ನು ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ನವದೆಹಲಿ: ಸುಪ್ರೀಂ ಕೋರ್ಟ್, ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಕೇಳಿಬರುವ ಅನುಚಿತ ವರ್ತನೆ ಹಾಗೂ ಅಸಾಮರ್ಥ್ಯ ಆರೋಪಗಳ ಬಗ್ಗೆ ತನಿಖೆ ನಡೆಸಲು ಈಗಿರುವ ವ್ಯವಸ್ಥೆಯನ್ನು ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಲೋಕಸಭೆಯಲ್ಲಿ ಅಂಗೀಕೃತಗೊಂಡಿದ್ದ ನ್ಯಾಯಾಂಗ ಮಾನದಂಡ ಹಾಗೂ ಉತ್ತರದಾಯಿತ್ವ ಮಸೂದೆ ಲೋಕಸಭೆ ವಿಸರ್ಜನೆಯಾದ ಹಿನ್ನೆಲೆಯಲ್ಲಿ  ರದ್ದುಗೊಂಡಿತ್ತು. ಈಗ ಇದೇ ಮಸೂದೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ನ್ಯಾಯಾಧೀಶರ ಮೇಲಿನ ಆರೋಪ ತನಿಖೆಗೆ ಹೊಸ ವ್ಯವಸ್ಥೆ ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 
ನ್ಯಾಯಾಂಗ ಮಾನದಂಡ ಹಾಗೂ ಉತ್ತರದಾಯಿತ್ವ ತಿದ್ದುಪಡಿ ಮಸೂದೆ ಮೂಲಕ  ನ್ಯಾಯಾಧೀಶರಲ್ಲಿ ಸ್ವಾಯತ್ತತೆ, ನಿಷ್ಪಕ್ಷಪಾತ ಮತ್ತು ಹೊಣೆಗಾರಿಕೆಯನ್ನು ಮೂಡಿಸುವುದನ್ನು ಪರಿಗಣಿಸಬೇಕು ಎಂದು ಕಾನೂನು ಸಚಿವಾಲಯ ಹೇಳಿದೆ. 2015 ರ ಡಿಸೆಂಬರ್ ನಲ್ಲಿ ಸಂಸತ್ ನಲ್ಲಿ ಹೇಳಿಕೆ ನೀಡಿದ್ದ ಕಾನೂನು ಸಚಿವ ಸದಾನಂದ ಗೌಡ,  ನ್ಯಾಯಾಂಗ ಮಾನದಂಡ ಹಾಗೂ ಉತ್ತರದಾಯಿತ್ವ ಮಸೂದೆ ರದ್ದುಗೊಂಡಿದೆ, ಹೊಸ ಮಸೂದೆ ಜಾರಿಗೆ ತರುವ ನಿಟ್ಟಿನಲ್ಲಿ  ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ, ತಿದ್ದುಪಡಿ ಅಂಶಗಳ ಬಗ್ಗೆ  ಸಂಬಂಧಪಟ್ಟವರಿಂದ ಸಲಹೆ ಸೂಚನೆಗಳನ್ನು ಪರಿಗಣಿಸಲಾಗುವುದು ಎಂದಿದ್ದರು.
ಮಾರ್ಚ್ 2012 ರಲ್ಲಿ ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದ ನ್ಯಾಯಾಂಗ ಮತ್ತು ಉತ್ತರದಾಯಿತ್ವ ಮಸೂದೆ 15 ನೇ ಲೋಕಸಭೆ ವಿಸರ್ಜನೆಯಾಗುವುದರೊಳಗೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಬೇಕಿತ್ತಾದರೂ, ಮಸೂದೆಯಲ್ಲಿನ ಕೆಲವು ಅಂಶಗಳಿಗೆ ವಿರೋಧ ವ್ಯಕ್ತವಾಗಿ ಪ್ರತಿಭಟನೆ ಕೂಡ ನಡೆದಿತ್ತು. ಈಗ ರದ್ದುಗೊಂದಿರುವ ಮಸೂದೆಗೆ ಕೆಲವು ತಿದ್ದುಪಡಿ ತಂದು ನ್ಯಾಯಾಧೀಶರ ಮೇಲಿನ ಆರೋಪ ತನಿಖೆಗೆ ಹೊಸ ವ್ಯವಸ್ಥೆಯ ಅಂಶವನ್ನು ಸೇರಿಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಿದ್ಧತೆ ನಡೆಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್