ದೇಶ

''ಪಂಚಕಜ್ಜಾಯ''ದ ಕಡೆ ಬಿಜೆಪಿ ದೃಷ್ಟಿ

Sumana Upadhyaya

ನವದೆಹಲಿ: ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪಾಂಡಿಚೆರಿ ಈ ಐದು ರಾಜ್ಯಗಳಲ್ಲಿ ಈ ವರ್ಷ ನಡೆಯಲಿರುವ ಚುನಾವಣೆಗೆ ಬಿಜೆಪಿ ಹೊಸ ರೀತಿಯಲ್ಲಿ ಸಿದ್ದತೆ ಮಾಡಿಕೊಳ್ಳುತ್ತಿದ್ದು, ಕೇಂದ್ರ ಸಂಪುಟದ ಸಚಿವರು ರಾಜ್ಯಗಳ ಪಕ್ಷದ ವಕ್ತಾರರನ್ನು ಈ ಬಾರಿ ಹೆಚ್ಚು ಹುರಿದುಂಬಿಸಲಿದ್ದಾರೆ.

ದೆಹಲಿ ಮತ್ತು ಬಿಹಾರ ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತ ಬಳಿಕ ಮುಂಬರುವ ಚುನಾವಣೆಗಳಲ್ಲಾದರೂ ಗೆಲ್ಲಬೇಕೆಂಬುದು ಬಿಜೆಪಿಯ ಆಕಾಂಕ್ಷೆಯಾಗಿದೆ. ಅದಕ್ಕಾಗಿ ಕೇಂದ್ರದ ಸಚಿವರು ವಕ್ತಾರರನ್ನು ಭೇಟಿ ಮಾಡಿ ಪಕ್ಷದ ಪರ ಹೇಗೆ ಪ್ರಚಾರ ನಡೆಸಬೇಕು, ಬಿಜೆಪಿಯ ಆಶಯವೇನು, ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ ಎಂಬುದನ್ನು ಜನರಿಗೆ ಸೂಕ್ತವಾಗಿ ಮನವರಿಕೆ ಮಾಡಬೇಕೆಂದು ತಿಳಿಸಲಾಗಿದೆ. ಇದರ ನೇತೃತ್ವವನ್ನು ಬಿಜೆಪಿಯ ''ಉತ್ತಮ ಆಡಳಿತ ಘಟಕ'' ವಹಿಸಿದೆ.

ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಕಳೆದ ಒಂದು ವರ್ಷದಿಂದ ಪಕ್ಷದ ವಕ್ತಾರರೊಂದಿಗೆ ಈ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ. ಕಳೆದ ವರ್ಷ ಅವರು ಬಜೆಟ್ ಗೂ ಮುನ್ನ ಸಂಸತ್ತಿನಲ್ಲಿ ವಿರೋಧಪಕ್ಷಗಳು ಉಂಟು ಮಾಡುವ ಸಂದಿಗ್ಧ ಸನ್ನಿವೇಶಗಳನ್ನು ಸಮರ್ಥವಾಗಿ ನಿರ್ವಹಿಸುವ ಬಗ್ಗೆ ಚರ್ಚಿಸಿದ್ದಾರೆ.

ಪಕ್ಷದ ವಕ್ತಾರರು ಉತ್ತಮ ರೀತಿಯಲ್ಲಿ ತಯಾರಿ ನಡೆಸಿ ಪಕ್ಷವನ್ನು ಹೇಗೆ ಚುನಾವಣೆಯಲ್ಲಿ ಗೆಲ್ಲಿಸಬಹುದು ಎಂಬ ಬಗ್ಗೆ ಅಧ್ಯಯನ ನಡೆಸಬೇಕೆಂದು ಪ್ರಧಾನ ಮಂತ್ರಿ ಮೋದಿಯವರು ಕೂಡ ಸೂಚಿಸಿದ್ದಾರೆ.

SCROLL FOR NEXT