ಸಾಂದರ್ಭಿಕ ಚಿತ್ರ 
ದೇಶ

ಈ ಬಾರಿ ಪ್ರೇಮಿಗಳ ದಿನದಂದು 'ಪ್ರೇಮಪಕ್ಷಿ'ಗಳಿಗಿಲ್ಲ ಬಜರಂಗದಳ, ಶಿವಸೇನಾ ಕಾಟ

ಈ ಬಾರಿ ಪ್ರೇಮಿಗಳ ದಿನದಂದು ನೈತಿಕ ಪೊಲೀಸ್ ಗಿರಿ ನಡೆಸದಿರಲು ಬಜರಂಗದಳ ಹಾಗೂ ಶಿವಸೇನೆ ನಿರ್ಧರಿಸಿದ್ದು, ಇದರಿಂದ ಪ್ರೇಮಿಗಳ ದಿನವನ್ನು ತಮ್ಮ...

ನವದೆಹಲಿ: ಈ ಬಾರಿ ಪ್ರೇಮಿಗಳ ದಿನದಂದು ನೈತಿಕ ಪೊಲೀಸ್ ಗಿರಿ ನಡೆಸದಿರಲು ಬಜರಂಗದಳ ಹಾಗೂ ಶಿವಸೇನೆ ನಿರ್ಧರಿಸಿದ್ದು, ಇದರಿಂದ ಪ್ರೇಮಿಗಳ ದಿನವನ್ನು ತಮ್ಮ ಪ್ರಿಯಕರ ಅಥವಾ ಪ್ರಿಯತಮೆಯೊಂದಿಗೆ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿರುವ ಯುವಕರಿಗೆ ಸ್ವಲ್ಪ ಲಿರೀಫ್ ಸಿಕ್ಕಂತಾಗಿದೆ.
ಈ ಎರಡೂ ಸಂಘಟನೆಗಳು ತಮ್ಮ ಕಾರ್ಯಕರ್ತರಿಗೆ, ಪ್ರೇಮಿಗಳ ದಿನದಂದು ಯಾವುದೇ ಪ್ರೇಮ ಪಕ್ಷಿಗಳಿಗೆ ತೊಂದರೆ ಕೊಡದಂತೆ ಸ್ಪಷ್ಟವಾಗಿ ಸೂಚಿಸಿದೆ. ಅಲ್ಲದೆ ಕಿರುಕುಳ ನೀಡಿದೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿವೆ,
ಪ್ರೇಮಿಗಳ ದಿನದಂದು ಯಾವುದೇ ಯುವಕ ಅಥವಾ ಯುವತಿಯೊಂದಿಗೆ ಕೆಟ್ಟದ್ದಾಗಿ ವರ್ತಿಸಬೇಡಿ. ಪ್ರೇಮಿಗಳ ಮೇಲೆ ಹಲ್ಲೆ ಅಥವಾ ಅವರೊಂದಿಗೆ ಅಸಭ್ಯ ವರ್ತನೆಯನ್ನು ನಾನು ಸಹಿಸಿಕೊಳ್ಳುವುದಿಲ್ಲ ಎಂದು ಶಿವಸೇನಾ ಯುವ ಘಟಕದ ರಾಷ್ಟ್ರೀಯ ಮುಖ್ಯಸ್ಥ ಅದಿತ್ಯ ಠಾಕ್ರೆ ಅವರು ಹೇಳಿದ್ದಾರೆ.
ಇನ್ನು ಬಜರಂಗದಳ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ್ ಸಂಚಾಲಕ ಸುರೇಂದ್ರ ಮಿಶ್ರಾ ಅವರು, ಯಾವುದೇ ಪ್ರೇಮಿಗಳಿಗೆ ತೊಂದರೆ ಕೊಡಬಾರದು ಎಂದು ಸಂಘಟನೆಯ ಉನ್ನತ ಮಟ್ಚದಲ್ಲಿ ನಿರ್ಧರಿಸಲಾಗಿದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ