ಮುಜಾಫರ್ ನಗರ: ಮಹಿಳೆಯನ್ನು ಕೊಲೆ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಧೋಲ್ರಾ ಹಳ್ಳಿಯಲ್ಲಿ ನಡೆದಿದೆ.
ಫೆಬ್ರವರಿ 10ರಂದು ಧೋಲ್ರಾ ಹಳ್ಳಿಯಲ್ಲಿ ಈ ಹಿಂದೆ ವಾಸವಾಗಿದ್ದ ವ್ಯಕ್ತಿಗಳು, ಅದೇ ಹಳ್ಳಿಯ ಚಂದ್ರಕಲಾಳನ್ನು ಕೊಲ್ಲುವ ಉದ್ದೇಶದಿಂದ ಶೂಟ್ ಮಾಡಿ, ಪರಾರಿಯಾಗಿದ್ದರು. ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಘಟನೆ ಸಂಬಂಧ ಏಳು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿದ್ದು, ಇಬ್ಬರು ಆರೋಪಿಗಳಾದ ಬಾಬುರಾಮ್ ಮತ್ತು ನಿಖಿಲ್ ನನ್ನು ಬಂಧಿಸಲಾಗಿದೆ ಎಂದು ಗ್ರಾಮೀಣ ಪ್ರದೇಶದ ಎಸ್ ಪಿ ಅಲೋಕ್ ಪ್ರಿಯದರ್ಶಿ ತಿಳಿಸಿದ್ದಾರೆ.