ಅರ್ರಾ: ಬಿಹಾರದ ಬಿಜೆಪಿ ಮುಖಂಡ ವಿಶೇಶ್ವರ್ ಓಜಾ ಕೊಲೆ ಖಂಡಿಸಿ ಭಾನುವಾರ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಕಾರ್ಯಕರ್ತರು ರೈಲು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಲೆ, ಗೂಂಡಾಗಿರಿ ತಡೆಯುವಲ್ಲಿ ಬಿಹಾರ ಸರ್ಕಾರ ವಿಫಲವಾಗಿದೆ. ರಾಜಯಕೀಯ ನಾಯಕರಿಗೆ ರಕ್ಷಣೆ ಇಲ್ಲದಂತಾಗಿದೆ. ಬಿಜೆಪಿ ನಾಯಕರನ್ನು ಕೊಲೆ ಮಾಡುವಂತೆ ಉತ್ತೇಜಿಸುತ್ತಿರುವ ಬಿಹಾರ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು, ಓಜಾ ಕೊಲೆಯನ್ನು ಖಂಡಿಸಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಕೊಲೆ ಸೇರಿದಂತೆ ಹಲವಾರರು ಪೊಲೀಸ್ ಪ್ರಕರಣಗಳಲ್ಲಿ ಓಜಾ ಅವರ ಹೆಸರು ಕೇಳಿ ಬಂದಿತ್ತು. ಒಂದೇ ದಿನದಲ್ಲಿ ಇಬ್ಬರು ಬಿಜೆಪಿ ನಾಯಕರ ಹತ್ಯೆ ಮಾಡಲಾಗಿತ್ತು. ಬಿಜೆಪಿ ನಾಯಕ ಕೇದರನಾಥ್ ಸಿಂಗ್ ಅವರನ್ನು ಗುಂಡಿಕ್ಕಿ ಕೊಂದ 12 ಗಂಟೆಗಳ ನಂತರ ಓಜಾ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.