ವಿಜಯಪುರ: ಜಮ್ಮು ಮತ್ತು ಕಾಶ್ಮೀರದಲ್ಲಿ ಶನಿವಾರ ಉಗ್ರರ ಜತೆ ನಡೆದ ಗುಂಡಿನ ಕಾಳಗದಲ್ಲಿ ಕರ್ನಾಟಕದ ಯೋಧರೊಬ್ಬರು ಮೃತಪಟ್ಟಿದ್ದಾರೆ.
ವಿಜಯಪುರದ ಇಂಡಿ ತಾಲ್ಲೂಕಿನ ಸಾವಳಸಂಗ ಗ್ರಾಮದ ಸಹದೇವ ಮಾರುತಿ ಮೋರೆ(26) ಉಗ್ರರ ಗುಂಡಿಗೆ ಬಲಿಯಾದ ಯೋಧ.
ಯೋಧ ಮಾರುತಿ ಮೋರೆ ಅವರ ಪಾರ್ಥೀವ ಶರೀರ ಸಂಜೆ ಬೆಳಗಾವಿ ತಲುಪಲಿದ್ದು, ಅಲ್ಲಿಂದ ಸಾವಳಸಂಗ ಗ್ರಾಮಕ್ಕೆ ಕೊಂಡಯ್ಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಶನಿವಾರ ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭಾರತೀಯ ಯೋಧರು ಮತ್ತು ಉಗ್ರರ ನಡುವೆ ಗುಂಡಿನ ಕಾಳಗ ನಡೆದಿತ್ತು, ಘಟನೆಯಲ್ಲಿ ಐವರು ಉಗ್ರರು ಮತ್ತು ಇಬ್ಬರು ಯೋಧರು ಮೃತಪಟ್ಟಿದ್ದರು.