ದೇಶ

ರಾಷ್ಟ್ರಪತಿಯವರಿಂದ ವಿಶ್ವ ಭಾರತಿ ವಿವಿ ಉಪಕುಲಪತಿ ವಜಾ

Rashmi Kasaragodu
ನವದೆಹಲಿ: ವಿಶ್ವಭಾರತಿ ವಿಶ್ವ ವಿದ್ಯಾನಿಲಯದ ಆಡಳಿತ ವ್ಯವಸ್ಥೆ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪ ಹೊತ್ತಿರುವ ಉಪ ಕುಲಪತಿ ಸುಶಾಂತ ದಾಸ್‌ಗುಪ್ತ ಅವರನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಜಾಗೊಳಿಸಿದ್ದಾರೆ.
ವಿಶ್ವಭಾರತಿ ಉಪಕುಲಪತಿ ಅವರನ್ನು ವಜಾಗೊಳಿಸಲು ಹೆಚ್‌ಆರ್‌ಡಿ ಸಚಿವಾಲಯ ಶಿಫಾರಸು ಮಾಡಿತ್ತು. ಇದಕ್ಕೆ ಅಟರ್ನಿ ಜನರಲ್ ಬೆಂಬಲ ವ್ಯಕ್ತಪಡಿಸಿತ್ತು.
ಒಂದೇ ಸಮಯದಲ್ಲಿ ವಿಶ್ವಭಾರತಿಯಿಂದ ಸಂಬಳ ಹಾಗೂ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದಿಂದ (ಜೆಎನ್‌ಯು) ನಿಂದ ಪಿಂಚಣಿ ಪಡೆಯುವ ಮೂಲಕ ದಾಸ್ ಗುಪ್ತ  ನಿಯಮ ಉಲ್ಲಂಘನೆ ಮಾಡಿದ್ದರು.
ಅದೇ ವೇಳೆ ಅಕ್ರಮವಾಗಿ ಪರೀಕ್ಷಾ ನಿಯಂತ್ರಕರನ್ನು ನೇಮಕ ಮಾಡುವ ಮೂಲಕ ದಾಸ್‌ಗುಪ್ತ ಭ್ರಷ್ಟಾಚಾರ ಮಾಡಿದ್ದಾರೆ. ಈ ಎಲ್ಲ ಕಾರಣಗಳಿಂದ ಅವರನ್ನು ವಜಾಗೈಯ್ಯಲಾಗಿದೆ.
2011ರಲ್ಲಿ  ನೇಮಕವಾಗಿದ್ದ ದಾಸ್‌ಗುಪ್ತ ಅವರಿಗೆ ಉಪಕುಲಪತಿ ಸ್ಥಾನದ ಜವಾಬ್ದಾರಿ ಅವಧಿ ಇನ್ನೂ ಒಂದು ವರ್ಷವಿದೆ. 
SCROLL FOR NEXT