ಪಾಟ್ನಾ: 2014ರಲ್ಲಿ ರಾಜಸ್ತಾನದಲ್ಲಿ ವಾಯುಪುತ್ರ ಹನುಮಾನ್‌ಗೆ ಆಧಾರ್‌ಕಾರ್ಡ್ ನೀಡಿದ್ದು ಸುದ್ದಿಯಾಗಿತ್ತು. ಇದೀಗ ಬಿಹಾರದ ಸ್ಥಳೀಯ ನ್ಯಾಯಾಲಯವೊಂದು ಹಿಂದೂ ದೇವರಾದ ಹನುಮಂತನಿಗೆ ಸಮನ್ಸ್ ನೀಡಿ ಕೋರ್ಟ್‌ಗೆ ಹಾಜರಾಗುವಂತೆ ಹೇಳಿದೆ.
ರಸ್ತೆ ಅಗಲೀಕರಣ ಮಾಡುವ ಸಲುವಾಗಿ ಹನುಮಾನ್ ದೇವಾಲಯವನ್ನು ತೆರವುಗೊಳಿಸಲು ಸಹಾಯ ಮಾಡಬೇಕೆಂದು ಲೋಕೋಪಯೋಗಿ ಇಲಾಖೆ ನ್ಯಾಯಾಲಯದ ಮೆಟ್ಟಿಲೇರಿತ್ತು. ಅಲ್ಲಿನ ನಾಗರಿಕರುರಸ್ತೆಯನ್ನು ಕಬಳಿಸಿ ಅಲ್ಲಿ ಹನುಮಂತನ ಪಂಚಮುಖ ಪ್ರತಿಮೆಯನ್ನು ಸ್ಥಾಪಿಸಿದ್ದರು. ಬುಧವಾರ ಲೋಕೋಪಯೋಗಿ ಇಲಾಖೆಯ ಅರ್ಜಿಯನ್ನು ಸ್ವೀಕರಿಸಿದ ನ್ಯಾಯಾಲಯ ಪ್ರಕರಣದ ಆರೋಪಿಯಾಗಿರುವ ಹನುಮಾನ್ ದೇವರನ್ನೇ ಕೋರ್ಟ್‌ಗೆ ಹಾಜರಾಗುವಂತೆ ಆದೇಶಿಸಿದೆ.
ನ್ಯಾಯಾಲಯದ ಈ ನಡೆಯನ್ನು ಖಂಡಿಸಿದ ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರು ನೋಟೀಸ್ ವಾಪಸ್ ಪಡೆಯುವಂತೆ ನ್ಯಾಯಾಲಯಕ್ಕೆ ಒತ್ತಾಯಿಸಿದ್ದಾರೆ.
ಇಂಥಾ ವಿಚಿತ್ರ ಪ್ರಕರಣಗಳು ಕೋರ್ಟ್‌ನಲ್ಲಿ ನಡೆದಿದ್ದು ಇದೇ ಮೊದಲನೆಯದ್ದೇನಲ್ಲ. ಫೆಬ್ರವರಿ 1 ರಂದು ಬಿಹಾರ್‌ನ ಸೀತಾಮರ್ಹಿ ಜಿಲ್ಲೆಯಲ್ಲಿ ರಾಮಾಯಣದಲ್ಲಿ ಸೀತೆಯನ್ನು ಬಿಟ್ಟು ಬಂದ ರಾಮ ಮತ್ತು ಲಕ್ಷ್ಮಣರ ವಿರುದ್ಧ ಕೇಸು ದಾಖಲಿಸಬೇಕೆಂದು ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ನ್ಯಾಯಾಲಯ ತಳ್ಳಿ ಹಾಕಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics