ನವದೆಹಲಿ: ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಬರೆದಿದ್ದ ಆತ್ಮಚರಿತ್ರೆ 'ಪ್ಲೆಯಿಂಗ್ ಇಟ್ ಮೈ ವೇ' ಪುಸ್ತಕ ಕಾಲ್ಪನಿಕ ಹಾಗೂ ಕಾಲ್ಪನಿಕವಲ್ಲದ ವಿಭಾಗದಲ್ಲಿ ಲಿಮ್ಕಾ ದಾಖಲೆ ಪುಸ್ತಕ ಸೇರಿದೆ.
ಹ್ಯಾಚೆಟ್ಟೆ ಇಂಡಿಯಾ 2014ರ ನವೆಂಬರ್ 6 ರಂದು ಪುಸ್ತಕವನ್ನು ಹೊರತಂದಿತ್ತು. ಅಂದಿನಿಂದ ಇಂದಿನವರೆಗೂ ಸುಮಾರು 1,50,289 ಪ್ರತಿಗಳು ಮಾರಾಟವಾಗಿ ಲಿಮ್ಕಾ ದಾಖಲೆ ಪುಸ್ತಕ ಸೇರಿದೆ.
ಸಚಿನ್ ತೆಂಡೂಲ್ಕರ್ ಅವರು ಆತ್ಮಚರಿತ್ರೆ ಪುಸ್ತಕಕ್ಕೆ ಬೋರಿಯಾ ಮಜುಂದಾರ್ ಸಹ ಬರಹಗಾರರಾಗಿದ್ದಾರೆ. ಪ್ಲೆಯಿಂಗ್ ಇಟ್ ಮೈ ವೇ ಪುಸ್ತಕದ ಬೆಲೆ 899 ರುಪಾಯಿಯಾಗಿದ್ದು, ಸುಮಾರು 13.51 ಕೋಟಿ ರುಪಾಯಿ ವಹಿವಾಟು ಮಾಡಿದೆ.