ಜೆಎನ್ ಯು ವಿವಾದ: ಭದ್ರತೆ ನಿರಾಕರಿಸಿದ ಕನ್ಙಯ್ಯ ತಂದೆ 
ದೇಶ

ಜೆಎನ್ ಯು ವಿವಾದ: ಭದ್ರತೆ ನಿರಾಕರಿಸಿದ ಕನ್ಙಯ್ಯ ತಂದೆ

ಜೆಎನ್ ಯು ವಿವಾದಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ವಿದ್ಯಾರ್ಥಿಯ ಸಂಘದ ಅಧ್ಯಕ್ಷ ಕನ್ಙಯ್ಯ ಕುಮಾರ್ ಅವರ ಕುಟುಂಬಕ್ಕೆ ನೀಡಲಾಗಿರುವ ಭದ್ರತೆಯನ್ನು ಕನ್ಹಯ್ಯ ತಂದೆ ನಿರಾಕರಿಸುವುದಾಗಿ ತಿಳಿದುಬಂದಿದೆ...

ಬಿಹಾರ: ಜೆಎನ್ ಯು ವಿವಾದಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ವಿದ್ಯಾರ್ಥಿಯ ಸಂಘದ ಅಧ್ಯಕ್ಷ ಕನ್ಙಯ್ಯ ಕುಮಾರ್ ಅವರ ಕುಟುಂಬಕ್ಕೆ ನೀಡಲಾಗಿರುವ ಭದ್ರತೆಯನ್ನು ಕನ್ಹಯ್ಯ ತಂದೆ ನಿರಾಕರಿಸುವುದಾಗಿ ತಿಳಿದುಬಂದಿದೆ. 
ನಮ್ಮ ಗ್ರಾಮ ನಮ್ಮೊಂದಿಗಿದ್ದು, ನಮಗೆ ಭದ್ರತೆಯ ಅಗತ್ಯವಿಲ್ಲದಿರುವುದರಿಂದ ಸೌಜನ್ಯಯುತವಾಗಿ ಪೊಲೀಸರನ್ನು ಹಿಂದಕ್ಕೆ ಕಳುಹಿಸಿದ್ದೇವೆ. ನ್ಯಾಯಾಲಯದಲ್ಲಿ ನಮ್ಮ ಮಗನ ಮೇಲೆ ಹಲ್ಲೆ ನಡೆದಿದೆ. ನಮಗೆ ಭದ್ರತೆ ನೀಡುವ ಬದಲು ಮಗನಿಗೆ ನೀಡಿ ಎಂದು ಹೇಳಿದ್ದಾರೆ. 
ಜೆಎನ್ ಯು ವಿದ್ಯಾರ್ಥಿ ಚುನಾವಣೆಯಲ್ಲಿ ನಮ್ಮ ಮಗ ಕನ್ಹಯ್ಯ ಬಿಜೆಪಿ ಹಾಗೂ ಆರ್'ಎಸ್ಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಸೋಲಿಸಿದ್ದಕ್ಕಾಗಿ ಅತನನ್ನು ಶಿಕ್ಷಿಸಲಾಗುತ್ತಿದೆ. ಘಟನೆಯಿಂದಾಗಿ ನಮ್ಮ ಮಗನ ಜೀವನ ಹಾಳಾಗಿದೆ ಎಂದು ಕನ್ಹಯ್ಯ ಕುಮಾರ್ ತಂದೆ ಜೈಶಂಕರ್ ಸಿಂಗ್ ಆರೋಪಿಸಿದ್ದಾರೆ. 
ಜೆನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ಆಯ್ಕೆಯಾಗಿರುವ ಕನ್ಹಯ್ಯ ಕುಮಾರ್ ತಂದೆ ಎರಡು ವರ್ಷಗಳಿಂದ ಪಾರ್ಶ್ವವಾಯು ಪೀಡಿತರಾಗಿ ಬಳಲುತ್ತಿದ್ದಾರೆ. ತಾಯಿ ಮೀನಾ ದೇವಿ ಅಂಗನವಾಡಿ ಶಿಕ್ಷಕಿಯಾಗಿದ್ದು, ಕೇವಲ ರೂ. 4,000 ವೇತನದಲ್ಲಿ ಅವರ ಕುಟುಂಬ ಜೀವನ ಸಾಗಿಸುತ್ತಿದೆ.  ಬಿಹಾರದ ಬೇಗುಸರೈ ಜಿಲ್ಲೆಯ ಬಾರೌನಿ ಪೊಲೀಸ್ ಠಾಣಾ ವ್ಯಾಪ್ತಿಯ ಮಸ್ನದ್ ಪುರದಲ್ಲಿ ಕನ್ಹಯ್ಯ ಹೆತ್ತವರು ವಾಸಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಕೊನೆಗೂ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ಹಣದುಬ್ಬರ ಶೇ.5.2; ಜನರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್? ಆಹಾರ, ಇಂಧನ ಬೆಲೆ ಏರಿಕೆ!

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ