104 ವರ್ಷದ ವೃದ್ಧೆ ವಂದಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ 
ದೇಶ

ಮೇಕೆಗಳನ್ನು ಮಾರಿ ಶೌಚ ಗೃಹ ನಿರ್ಮಾಣ: ಶತಾಯುಷಿಯ ಕಳಕಳಿಗೆ ಶಿರಬಾಗಿದ ಪ್ರಧಾನಿ ಮೋದಿ

ಛತ್ತೀಸ್ ಗಢದಲ್ಲಿ 104 ವರ್ಷದ ವೃದ್ಧೆಯೊಬ್ಬರು ತಮ್ಮ ಬಳಿ ಇದ್ದ 8 -10 ಮೇಕೆಗಳನ್ನು ಮಾರಿ ಶೌಚ ಗೃಹ ನಿರ್ಮಿಸಿದ್ದಾರೆ.

ಛತ್ತೀಸ್ ಗಢ: ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛಭಾರತ ಅಭಿಯಾನ, ಬಯಲು ಶೌಚ ಮುಕ್ತ ಭಾರತಕ್ಕೆ ಕರೆ ನೀಡಿದ ನಂತರ ಅನೇಕರು ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಛತ್ತೀಸ್ ಗಢದಲ್ಲಿ 104 ವರ್ಷದ ವೃದ್ಧೆಯೊಬ್ಬರು ತಮ್ಮ ಬಳಿ ಇದ್ದ 8 -10 ಮೇಕೆಗಳನ್ನು ಮಾರಿ ಶೌಚ ಗೃಹ ನಿರ್ಮಿಸಿದ್ದಾರೆ.
ಛತ್ತೀಸ್​ಗಢದಲ್ಲಿ ರುರ್ಬನ್ ಮಿಷನ್ ಯೋಜನೆಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮೇಕೆಗಳನ್ನು ಮಾರಿ ಶೌಚ ಗೃಹ ನಿರ್ಮಿಸಿದ ಧಮ್ತರಿ ಜಿಲ್ಲೆಯ 104 ವರ್ಷದ ಕುನ್ವರ್ ಬಾಯಿ ಅವರನ್ನು ವಿಶೇಷವಾಗಿ ಅಭಿನಂದಿಸಿದರು.
ಮೇಕೆಗಳನ್ನು ಮಾರಾಟ ಮಾಡಿ ಶೌಚಗೃಹ ನಿರ್ಮಿಸಿದ್ದಕ್ಕೆ ಅಭಿನಂದಿಸುವುದಷ್ಟೇ ಅಲ್ಲದೇ ಪ್ರಧಾನಿ ಮೋದಿ ಕುನ್ವರ್ ಬಾಯಿ ಅವರ ಪಾದಕ್ಕೆರಗಿ ಅವರ ಆಶೀರ್ವಾದ ಪಡೆದರು. ಧಮ್ತರಿ ಜಿಲ್ಲೆಯ ಕೊಟ್ಟಭರಿ ಗ್ರಾಮದ ಕುನ್ವರ್ ಬಾಯಿ ತಮ್ಮ ಬಳಿ ಇದ್ದ ಮೇಕೆಯನ್ನು ಮಾರಿ ಶೌಚಗೃಹ ನಿರ್ಮಿಸಿಕೊಂಡಿರುವುದು ಭಾರತ ಬದಲಾಗುತ್ತಿದೆ ಎಂಬುದರ ಸಂಕೇತ. ಕುಗ್ರಾಮವೊಂದರ ವೃದ್ಧೆ ಸ್ವಚ್ಛ ಭಾರತಕ್ಕೆ ಕೈಜೋಡಿಸಿದ್ದು, ಅವರು ದೇಶದ ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಗ್ರಾಮಗಳಲ್ಲಿಯೂ ನಗರ ಸೌಲಭ್ಯಗಳನ್ನು ಕಲ್ಪಿಸಲು ಹಾಗೂ ಯುವಕರ ನಗರವಲಸೆ ತಡೆಯಲು ಶ್ಯಾಮಾಪ್ರಸಾದ್ ಮುಖರ್ಜಿ ರುರ್ಬನ್ ಮಿಷನ್ ಯೋಜನೆಯಡಿ  ಮೂರು ವರ್ಷಗಳಲ್ಲಿ ಐದು ಸಾವಿರ ಕೋಟಿ ರೂ. ಅನುದಾನದಲ್ಲಿ 300 ಗ್ರಾಮಗಳ ಸಮೂಹ (ಕ್ಲಸ್ಟರ್)ಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!