ನವದೆಹಲಿ: ಪತಿಯಿಂದ ದೂರವಿರುವ ಪತ್ನಿ ತನ್ನ ಗಂಡನಿಗೆ ವಿಚ್ಛೇದನ ನೀಡುವುದಾಗಿ ಬೆದರಿಸಿ ಪತ್ರ ಬರೆದರೇ ಆತ ವಿಚ್ಛೇದನ ನೀಡಲು ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ.
ವ್ಯಕ್ತಿಯೊಬ್ಬ ತನ್ನ ಹೆಂಡತಿ 28 ವರ್ಷಗಳಿಂದ ತನ್ನಿಂದ ದೂರವಿರುವ ಬಗ್ಗೆ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.
1980 ರಲ್ಲಿ ವಿವಾಹವಾಗಿದ್ದು 1987 ರಲ್ಲಿ ಆಕೆ ಪತಿ ಮತ್ತು ನಾಲ್ಕು ವರ್ಷದ ಮಗಳನ್ನು ಭಾರತದಲ್ಲೇ ಬಿಟ್ಟು ಹೋಗಿದ್ದಳು.
1990 ರಲ್ಲಿ ತನ್ನ ಪತ್ನಿಯಿಂದ ಒಂದು ಪತ್ರ ಬಂದಿತ್ತು. ನನಗೆ ನನ್ನ ಹಳೇಯ ಗೆಳೆಯ ಸಿಕ್ಕಿದ್ದಾನೆ. ಆತನ ನನ್ನನ್ನು ವಿವಾಹವಾಗಲು ಬಯಸಿದ್ದಾನೆ, ಜೊತೆದೆಗೆ ತನ್ನ ಅಪ್ರಾಪ್ತ ಮಗಳನ್ನು ತನ್ನ ಮಗಳೆಂದು ಒಪ್ಪಿಕೊಳ್ಳಲು ಸಿದ್ದನಿದ್ದಾನೆ ಎಂದು ಪತ್ರ ಬರೆದಿದ್ದಳು.
ಆದರೆ ಆಕೆ ಬರೆದ ಪತ್ರದಲ್ಲಿ ಯಾವುದೇ ಸತ್ಯಾಂಶವಿರಲಿಲ್ಲ. ವಾಪಸ್ ತನ್ನ ಗಂಡನ ಜೊತೆ ಬಂದು ಜೀವನ ನಡೆಸುವ ಉದ್ದೇಶದಿಂದ ಈ ಪತ್ರ ಬರೆದಿದ್ದಳು ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಇನ್ನು ಈ ಪ್ರಕರಣಕ್ಕೆ ದೆಹಲಿ ಹೈಕೋರ್ಟ್ ಹೊಸ ಟ್ವಿಸ್ಟ್ ನೀಡಿದೆ. ಹೆಂಡತಿಯಿಂದ ಬಂದಿರುವ ಬೆದರಿಕೆಯಿಂದ ಕೂಡಿದೆ. ಈ ಪತ್ರ ಕ್ರೌರ್ಯವನ್ನು ತೋರುತ್ತದೆ. ಗಂಡನ ಮಾನಸಿಕ ಸ್ಥೈರ್ಯವನ್ನು ಕುಂದಿಸುವ ಈ ಬೆದರಿಕೆ ಪತ್ರದ ಆಧಾರದ ಮೇಲೆ ಪತಿ ತನ್ನ ಪತ್ನಿಯಿಂದ ವಿಚ್ಛದನ ಪಡೆದುಕೊಳ್ಳಬಹುದು ಎಂದು ಹೇಳಿದೆ.