ದೇಶ

ಅಭಿವೃದ್ಧಿ ಉತ್ತೇಜನಕ್ಕೆ ಹೊಸ ರೈಲುಗಳನ್ನು ಘೋಷಿಸಿ: ತಜ್ಞರ ಸಲಹೆ

Srinivas Rao BV

ಶಿವಮೊಗ್ಗ: ರೈಲ್ವೆ ಸಚಿವ ಸುರೇಶ್ ಪ್ರಭು ಬಜೆಟ್ ಮಂಡನೆ ಮಾಡುವುದಕ್ಕೆ ಇನ್ನೆರಡು ದಿನ ಬಾಕಿ ಇದ್ದು ಹೊಸ ರೈಲುಗಳ ಘೋಷಣೆ ಬಗ್ಗೆ ಜನರ ನಿರೀಕ್ಷೆಗಳು ಗರಿಗೆದರಿವೆ. ಜನಸಾಮಾನ್ಯರ ನಿರೀಕ್ಷೆಗಳೊಂದಿಗೆ ಅಭಿವೃದ್ಧಿಗೆ ಪೂರಕವಾಗುವ ಅನೇಕ ಸಲಹೆಗಳನ್ನು ತಜ್ಞರೂ ನೀಡುತ್ತಿದ್ದಾರೆ.
ಅತಿ ಹೆಚ್ಚು ಜನ ಸಂಚಾರ ಇರುವ ಶಿವಮೊಗ್ಗ- ಚಿತ್ರದುರ್ಗ ಮಾರ್ಗದಲ್ಲಿ ಹೊಸ ರೈಲುಗಳನ್ನು ಘೋಷಿಸಿದರೆ ವ್ಯಾಪಾರ-ವಹಿವಾಟುಗಳಿಗೆ ಅನುಕೂಲವಾಗುತ್ತದೆ ಈ ಮೂಲಕ ಅಭಿವೃದ್ಧಿಯೂ ಸಾಧ್ಯವಾಗುತ್ತದೆ ರೈಲು ಸಂಪರ್ಕ ಕಡಿಮೆ ಇರುವ ಎರಡು ನಗರಗಳನ್ನು ಸಂಪರ್ಕಿಸುವ ರೈಲುಗಳನ್ನು ಪರಿಚಯಿಸುವತ್ತ ರೈಲ್ವೆ ಸಚಿವ ಸುರೇಶ್ ಪ್ರಭು ಗಮನ ಹರಿಸಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಚಿತ್ರದುರ್ಗ ಮೂಲಕ ಶಿವಮೊಗ್ಗ-ಬಳ್ಳಾರಿ ರಸ್ತೆ ಮಾರ್ಗದಲ್ಲಿ ಪ್ರತಿ 20 ನಿಮಿಷಕ್ಕೊಂದು ಬಸ್ ಸಂಚರಿಸುತ್ತವೆ. ಚಿಕ್ಕಜಾಜೂರು ಮೂಲಕ  ಶಿವಮೊಗ್ಗ-ಬಳ್ಳಾರಿಗೆ ಹೆಚ್ಚು ರೈಲು ಸಂಚಾರ ಕಲ್ಪಿಸಿದರೆ ಎರಡು ನಗರಗಳಲ್ಲಿನ ವಾಣಿಜ್ಯ, ವ್ಯಾಪಾರ ಚಟುವಟಿಕೆಗಳಿಗೆ ಉತ್ತೇಜನ ನೀಡಿದಂತಾಗುತ್ತದೆ. ಪ್ರಸ್ತುತ ಚಿಕ್ಕಜಾಜೂರುನಿಂದ ಬಳ್ಳಾರಿಗೆ ಪ್ಯಾಸೆಂಜರ್ ರೈಲು ಸಂಚರಿಸುತ್ತಿದ್ದು  6 ಗಂಟೆಗಳ ಕಾಲ ಸಂಚಾರ ಮಾಡಬೇಕಾಗುತ್ತದೆ. ಪ್ಯಾಸೆಂಜರ್ ರೈಲುಗಳಿಗಿಂತ ಹೆಚ್ಚು ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಘೋಷಿಸಿದರೆ ಉತ್ತಮ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT