ದೇಶ

ಥ್ರೆಡ್ ಮಿಲ್ ಬಳಕೆ ಬಿಟ್ಟು ಯೋಗ ಮಾಡಿ, ವರ್ಷಕ್ಕೆ 3000 ರೂ ಉಳಿಸಿ: ಕೇಂದ್ರದ ಸಲಹೆ

Srinivas Rao BV

ನವದೆಹಲಿ: ಥ್ರೆಡ್ ಮಿಲ್ ನಲ್ಲಿ ಓಡುವುದಕ್ಕಿಂತ ಒಂದು ಗಂಟೆ ಯೋಗ ಮಾಡಿ, ಟಿವಿ ನೋಡುವುದಕ್ಕಿಂತ ಹೊರ ಹೋಗಿ ಆಟವಾಡಿ, ತಲುಪಬೇಕಿರುವ ಸ್ಥಳ ಹತ್ತಿರದಲ್ಲೇ ಇದ್ದರೆ ನಡೆದು ಹೋಗಿ, ನಿಮ್ಮ ಪಠ್ಯಪುಸ್ತಕಗಳನ್ನು ಕಿರಿಯರಿಗೆ ನೀಡಿ, ಇವು ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದಕ್ಕೆ ಕೇಂದ್ರ ಪರಿಸರ ಹಾಗೂ ಅರಣ್ಯ ಇಲಾಖೆ ನೀಡಿರುವ ಸಲಹೆಗಳು
ಮೇಲಿನ ಸಲಹೆಗಳನ್ನು ಪಾಲಿಸುವುದರಿಂದ ಜನಸಾಮಾನ್ಯರು ಕಾರ್ಬನ್ ಎಮಿಷನ್ ಕಡಿಮೆ ಮಾಡಲು ಸಾಧ್ಯವಾಗುವುದರ ಜೊತೆ ವರ್ಷಕ್ಕೆ 3000 ಉಳಿತಾಯ ಮಾಡಬಹುದು ಎಂದು ಕೇಂದ್ರ ಸರ್ಕಾರದ ಇಲಾಖೆ ಹೇಳಿದೆ. ಆಂಥ್ರೋಪೋಜೆನಿಕ್ ಗ್ರೀನ್ ಹೌಸ್ ಎಮಿಷನ್ ಗೆ ಜನ ಸಂಖ್ಯೆಯ ಗಾತ್ರ, ಆರ್ಥಿಕ ಚಟುವಟಿಕೆ, ಜೀವನಶೈಲಿ, ಶಕ್ತಿಯ ಬಳಕೆ, ತಂತ್ರಜ್ಞಾನ ಮತ್ತು ವಾತಾವರಣ ನೀತಿ ಕಾರಣವಾಗಿದೆ.   
ಕಡಿಮೆ ಇಂಗಾಲ ಹೊರಸೂಸುವಂತೆ ಮಾಡುವುದಕ್ಕೆ ಕ್ರಮ ಕೈಗೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಇಲಾಖೆ ಬಿಡುಗಡೆ ಮಾಡಿರುವ ಪತ್ರದಲ್ಲಿ ತಿಳಿಸಲಾಗಿದೆ. ಥ್ರೆಡ್ ಮಿಲ್ ನಲ್ಲಿ ಓಡುವ ಬದಲು ಯೋಗ ಮಾಡಿದರೆ 446  ಕೆಜಿ ಯಷ್ಟು ಕಾರ್ಬನ್ ಎಮಿಷನ್ ನನ್ನು ತಡೆಗಟ್ಟಬಹುದು ಜೊತೆಗೆ  ವರ್ಷಕ್ಕೆ 3000 ರೂಪಾಯಿ ಯಷ್ಟು  ವಿದ್ಯುತ್ ಬಿಲ್ ನ್ನು ಉಳಿಸಬಹುದು. ಇನ್ನು ಅನಗತ್ಯವಾಗಿ ಮೈಕ್ರೋವೇವ್ ಒವನ್ ಬಳಕೆ ಕಡಿಮೆ ಮಾಡುವುದರಿಂದ 30 ಕೆಜಿಯಷ್ಟು ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡಬಹುದು ಎಂದು ಪರಿಸರ ಹಾಗೂ ಅರಣ್ಯ ಇಲಾಖೆ ಹೇಳಿದೆ.

SCROLL FOR NEXT