ಸುಪ್ರೀಂಕೋರ್ಟ್ ಮತ್ತು ಸುಬ್ರಮಣಿಯನ್ ಸ್ವಾಮಿ (ಸಂಗ್ರಹ ಚಿತ್ರ) 
ದೇಶ

ರಾಮಮಂದಿರ ನಿರ್ಮಾಣ: ಸ್ವಾಮಿ ಅರ್ಜಿ ವಿಚಾರಣೆಗೆ "ಸುಪ್ರೀಂ" ಸಮ್ಮತಿ

ಅಯೋಧ್ಯೆಯ ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಸಂಬಂಧ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂಕೋರ್ಟ್ ಕೊನೆಗೂ ಸಮ್ಮತಿ ಸೂಚಿಸಿದೆ.

ನವದೆಹಲಿ: ಅಯೋಧ್ಯೆಯ ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಸಂಬಂಧ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ  ಸುಪ್ರೀಂಕೋರ್ಟ್ ಕೊನೆಗೂ ಸಮ್ಮತಿ ಸೂಚಿಸಿದೆ.

ಆದರೆ ಸುಬ್ರಣಿಯನ್ ಸ್ವಾಮಿ ಅವರ ಅರ್ಜಿಯನ್ನು ಪ್ರತ್ಯೇಕವಾಗಿ ವಿಚಾರಣೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಬಾಕಿ ಉಳಿದಿರುವ ಪ್ರಕರಣಗಳಡಿಯಲ್ಲಿ  ಅರ್ಜಿಯ ವಿಚಾರಣೆ ನಡೆಸಬಹುದು ಎಂದು ಹೇಳಿದೆ. ಇದೇ ವೇಳೆ ಸ್ವಾಮಿ ಅವರ ಅರ್ಜಿಯನ್ನು ಅಯೋಧ್ಯಾ ಮಾಲೀಕತ್ವ ವಿವಾದದ ಇತರೆ ಪ್ರಕರಣಗಳ ಜೊತೆ ಸೇರಿಸಿದೆ. ಆ ಮೂಲಕ  ವಿವಾದಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಸ್ವಾಮಿ ಅವರಿಗೆ ಮಧ್ಯ ಪ್ರವೇಶಕ್ಕೆ ಅವಕಾಶ ನೀಡಿದೆ.

ಶುಕ್ರವಾರ ಪ್ರಕರಣದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಗೋಪಾಲ ಗೌಡ ಹಾಗೂ ಅರುಣ್ ಮಿಶ್ರಾ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ, ಹಿಂದೂಗಳ ಮೂಲಭೂತ ಹಕ್ಕಾಗಿ  ಪರಿಗಣಿಸಿ 1992ರಲ್ಲಿ ವಿವಾದಿತ ಕಟ್ಟಡ ನಾಶಪಡಿಸಲಾಗಿದ್ದ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ನೀಡುವಂತೆ ಕೋರಿ ಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಪ್ರತ್ಯೇಕವಾಗಿ  ಆಲಿಸಲು ಸಾಧ್ಯವಿಲ್ಲ. ಹೀಗಾಗಿ ಸ್ವಾಮಿ ಅವರ ಅರ್ಜಿಯನ್ನು ಇತ್ಯಾರ್ಥವಾಗದೇ ಉಳಿದಿರುವ ಇತರ ಸಿವಿಲ್ ಮೇಲ್ಮನವಿಗಳ ಜೊತೆ ಸೇರಿಸಲು ಆದೇಶ ನೀಡಿತು.

"ಸಾಕ್ಷ್ಯಾಧಾರಗಳು ಇದ್ದಲ್ಲಿ ಮತ್ತು ಭಾರತೀಯ ಪುರಾತತ್ವ ಇಲಾಖೆ ಸಾಕ್ಷ್ಯಗಳನ್ನು ಹೊಂದಿದ್ದಲ್ಲಿ ವಿವಾದಿತ ಜಾಗದಲ್ಲಿ ದೇವಾಲಯ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವುದಾಗಿ ಸರ್ಕಾರವು  ಈಗಾಗಲೇ ಅಫಿಡವಿಟ್ ಸಲ್ಲಿಸಿದೆ ಎಂದು ಸ್ವಾಮಿ ಈ ಹಿಂದೆ ವಾದಿಸಿದ್ದರು. ಸ್ವಾಮಿ ಅವರ ವಾದದ ಸಂಬಂಧ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠವು, "ತನ್ನ ಮುಂದೆ ಸಿವಿಲ್  ಮೇಲ್ಮನವಿಗಳೇ ಇತ್ಯರ್ಥವಾಗದೇ ಉಳಿದಿರುವಾಗ ‘ರಿಟ್ ಅರ್ಜಿ’ಯನ್ನು ಆಲಿಸಲು ಸಾಧ್ಯವಿಲ್ಲ. ಆದ್ದರಿಂದ ಸುಬ್ರಮಣಿಯನ್ ಸ್ವಾಮಿಯವರು ತಮ್ಮ ಮೂಲಭೂತ ಹಕ್ಕಿನ ಜಾರಿಗೆ ಆಗ್ರಹಿಸಿ  ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಬೇಕು ಅಥವಾ ಬಾಕಿ ಪ್ರಕರಣಗಳಲ್ಲಿ ಮಧ್ಯಪ್ರವೇಶ ಕೋರಿ ಇಲ್ಲೇ ಅರ್ಜಿ ಸಲ್ಲಿಸಬೇಕು" ಎಂದು ಹೇಳಿತು.

ಈ ಹಿಂದೆ ತಮ್ಮ ಅರ್ಜಿ ಸಂಬಂಧ ವಾದ ಮಂಡಿಸಿದ್ದ ಸುಬ್ರಮಣಿಯನ್ ಸ್ವಾಮಿ ಅವರು, "ಪಾವಿತ್ರ್ಯ ವಿಚಾರದಲ್ಲಿ ಮಸೀದಿಯನ್ನು ದೇವಾಲಯಕ್ಕೆ ಹೋಲಿಸಲು ಸಾಧ್ಯವಿಲ್ಲ. ಮಸೀದಿಯು ಇಸ್ಲಾಂ  ಧರ್ಮದ ಅನಿವಾರ್ಯ ಅಥವಾ ಅತ್ಯಗತ್ಯ ಭಾಗವಲ್ಲ. ಇಸ್ಲಾಂ ರಾಷ್ಟ್ರಗಳಲ್ಲಿ ರಸ್ತೆ ಮುಂತಾದ ಸಾರ್ವಜನಿಕ ಮಹತ್ವದ ಕಾಮಗಾರಿಗಾಗಿ ಮಸೀದಿಯನ್ನು ಸ್ಥಳಾಂತರಿಸಲಾಗುತ್ತದೆ. ಆದರೆ  ದೇವಾಲಯವನ್ನು ಹಾಗೆ ಸ್ಥಳಾಂತರಿಸುವಂತಿಲ್ಲ. ಜೀರ್ಣಗೊಂಡಿದ್ದರೂ ದೇವಾಲಯ ದೇವಾಲಯವೇ" ಎಂದು ಹೌಸ್ ಆಫ್ ಲಾರ್ಡ್ಸ್ (ಯುಕೆ) 1991 ಸುಪ್ರೀಂಕೋರ್ಟಿನ ಪೂರ್ಣ ಪೀಠದ  ತೀರ್ಪನ್ನು ಉಲ್ಲೇಖಿಸಿ ಸ್ವಾಮಿ ಎಂದು ವಾದ ಮಂಡಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT