ದೇಶ

ಭಾರತೀಯ ದಂಡ ಸಂಹಿತೆಯ ಕಾಯ್ದೆ ಪರಿಷ್ಕರಣೆ ಅಗತ್ಯವಿದೆ: ಪ್ರಣಬ್ ಮುಖರ್ಜಿ

Manjula VN

ಕೊಚ್ಚಿ: ಜೆಎನ್ ಯು ಪ್ರಕರಣ ಸಂಬಂಧ ದೇಶದಾದ್ಯಂತ ವ್ಯಾಪಕ ನಡೆಯುತ್ತಿರುವ ನಡುವೆಯೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಭಾರತೀಯ ದಂಡ ಸಂಹಿತೆಯ ಸ್ವರೂಪಕ್ಕೆ ಪರಿಷ್ಕರಣೆ ಅಗತ್ಯವಿದೆ ಎಂದು ಶುಕ್ರವಾರ ಹೇಳಿದ್ದಾರೆ.

ಭಾರತೀಯ ದಂಡ ಸಂಹಿತೆಯ 155ನೇ ವಾರ್ಷಿಕೋತ್ಸವದ ಸಮಾರೋಪದಲ್ಲಿ ಮಾತನಾಡಿರುವ ಅವರು, ಕೇವಲ ಕೆಲವು ಅಪರಾಧಗಳನ್ನು ಐಪಿಸಿಗೆ ಸೇರ್ಪಡೆ ಮಾಡಿ, ಅವುಗಳನ್ನು ಶಿಕ್ಷಿತ ಅಪರಾಧಗಳೆಂದು ಘೋಷಣೆಮಾಡಲಾಗಿದೆ. ಇದೀಗ ಐಪಿಸಿಗೆ ಬದಲಾವಣೆ ತರುವ ಅಗತ್ಯವಿದ್ದು, 21ನೇ ಶತಮಾನದ ಅಗತ್ಯಗಳಿಗೆ ಹೋಲಿಕೆಯಾಗುವ ರೀತಿಯಲ್ಲಿ ಐಪಿಸಿ ಕಾಯ್ದೆಗಳನ್ನು ಪರಿಷ್ಕರಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಇರುವ ಐಪಿಸಿ ಕಾಯ್ದೆಗಳಲ್ಲಿ ಹಳೆಯ ಅಪರಾಧಗಳಿವೆ. ಆದರೆ, ಹೊಸ ಅಪರಾಧ ಪ್ರಕರಗಳು ಇದಲ್ಲಿ ಇನ್ನು ಸೇರ್ಪಡೆಗೊಂಡಿಲ್ಲ. ಅವುಗಳನ್ನು ಐಪಿಸಿಗೆ ಸೇರಿಸಿ ಇಂತಹ ಅಪರಾಧಗಳಿಗೆ ಹೊಸ ವ್ಯಾಖ್ಯಾನ ನೀಡಿ, ಐಪಿಸಿ ಕಾಯ್ದೆಗಳಿಗೆ ಸೇರ್ಪಡೆ ಮಾಡಬೇಕಿದೆ.

ಇತ್ತೀಚಿನ ದಿನಗಳಲ್ಲಿ ಆರ್ಥಿಕ ಅಪರಾಧಗಳು ಹೆಚ್ಚಾಗುತ್ತಿದ್ದು, ಭಾರೀ ಬೆದರಿಕೆಯನ್ನು ಸೃಷ್ಟಿಮಾಡುತ್ತಿದೆ. ಈ ರೀತಿಯ ಬೆದರಿಗಳು ಪ್ರಗತಿ ಮತ್ತು ರಾಷ್ಟ್ರೀಯ ಬೆಳವಣಿಗೆಗೆ ಅಡ್ಡಿಯುಂಟು ಮಾಡುತ್ತವೆ. ಇತ್ತೀಚಿನ ಹೊಸ ಅಪರಾಧಗಳನ್ನು ಕ್ರಿಮಿನಲ್ ಕಾಯ್ದೆ ವ್ಯಾಪ್ತಿಗೆ ಬರುವಂತೆ ಮಾಡುವುದು ನಿಜವಾದ ಸವಾಲಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಪೊಲೀಸ್ ವ್ಯವಸ್ಥೆ ಕುರಿತಂತೆ ಮಾತನಾಡಿರುವ ಅವರು, ಆಧಿನಿಕ ಪ್ರಜಾಸತ್ತಾತ್ಮಕ ರಾಷ್ಟ್ರದ ಅಗತ್ಯಗಳಿಗೆ ತಕ್ಕಂತೆ ಪೊಲೀಸ್ ವ್ಯವಸ್ಥೆಯಲ್ಲಿ ಬದಲಾವಣೆ ತರುವಂತಹ ಕೆಲಸಗಳನ್ನು ಕಾನೂನು ಜಾರಿ ಸಂಸ್ಥೆಗಳು ಮಾಡಬೇಕು. ಆಧುನಿಕ ಭಾರತದಲ್ಲಿ ಕಾನೂನಿನ ನಿಯಮ ಪ್ರಧಾನ ತತ್ವವಾಗಿ ಉಳಿಯಲು ಹಾಗೂ ಸರ್ವಕಾಲದಲ್ಲೂ ಎತ್ತಿ ಹಿಡಿಯಲು ಹೆಚ್ಚಿನ ಆದ್ಯತೆಯನ್ನು ನೀಡಿ ಇತ್ತ ನಿಗಾ ವಹಿಸಬೇಕು ಎಂದು ಹೇಳಿದ್ದಾರೆ.

SCROLL FOR NEXT