ದೇಶ

ಸ್ಮೃತಿ ರುಂಡಕ್ಕೆ ಬೇಡಿಕೆ ಇಟ್ಟ ಮಾಯಾವತಿ

Manjula VN

ನವದೆಹಲಿ: ನನಗೆ ನಿಮ್ಮ ಉತ್ತರ ತೃಪ್ತಿ ತಂದಿಲ್ಲ. ನೀವು ನೀಡಿದ್ದ ವಾಗ್ದಾನವನ್ನು ಉಳಿಸಿಕೊಳ್ಳುತ್ತೀರಾ? ಎಂದು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿಯವರು ಸ್ಮೃತಿ ಇರಾನಿಯವರಿಗೆ ತಿರುಗೇಟು ನೀಡಿದ್ದಾರೆ.

ಎರಡು ದಿನಗಳ ಹಿಂದಷ್ಟೇ ದಲಿತ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣ ಸಂಬಂಧಿಸಿ ಸ್ಮೃತಿ ಇರಾನಿಯವರು  ಹೇಳಿಕೆಯೊಂದನ್ನು ನೀಡಿದ್ದರು. ತಾನು ನೀಡಿದ್ದ ಉತ್ತರ ತೃಪ್ತಿಯಾಗದಿದ್ದರೆ ರುಂಡ ಕಡಿದು ನೀಡುತ್ತೇನೆಂದು ಹೇಳಿದ್ದರು.

ಈ ಹೇಳಿಕೆಯನ್ನು ನಿನ್ನೆ ರಾಜ್ಯಸಭೆಯಲ್ಲಿ ಮಾಯಾವತಿಯವರು ಪ್ರಸ್ತಾಪಸಿದ್ದರು. ನನಗೆ ನಿಮ್ಮ ಉತ್ತರ ತೃಪ್ತಿ ತಂದಿಲ್ಲ. ನಿಮ್ಮ ವಾಗ್ದಾನವನ್ನು ಉಳಿಸಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದ್ದರು. ಅಲ್ಲದೆ, ಇಬ್ಬರ ನಡುವೆ ಸಾಕಷ್ಟು ವಾಕ್ಸಮರ ಮುಂದುವರೆದಿತ್ತು. ನಂತರ ಮಾತನಾಡಿದ ಸ್ಮೃತಿ ಇರಾನಿಯವರು, ನನ್ನ ತಲೆಯನ್ನು ಕತ್ತರಿಸಿ ತೆಗೆದುಕೊಂಡು ಹೋಗುವಂತೆ ಬಿಎಸ್ ಪಿ ಕಾರ್ಯಕರ್ತರಲ್ಲಿ ಮನವಿ ಮಾಡುತ್ತಿದ್ದೇನೆ. ನಿಮಗೆ ಸಮಾಧಾನವಾಗದಿದ್ದರೆ ನನ್ನ ರುಂಡುವನ್ನು ಕತ್ತರಿಸಿ ನಿಮ್ಮ ಪಾದಗಳ ಬಳಿ ಇಡುತ್ತೇನೆ ಎಂದರು.

ನಂತರ ಮಾತನಾಡಿರ ಸಿಪಿಐಎಂ ನಾಯಕ ಸೀತಾರಾಂ ಯೆಚೂರಿ, ಅವರು. ದಲಿತ ವಿದ್ಯಾರ್ಥಿ ರೋಹಿತ್ ಆತ್ಮಹತ್ಯೆ ಮಾಡಿಕೊಳ್ಳುವಂತೆ ಸರ್ಕಾರ ತನ್ನ ಕ್ರಮಗಳ ಮೂಲಕ ಪರೋಕ್ಷವಾಗಿ ಪ್ರೇರೇಪಿಸಿತ್ತು ಎಂದು ಆರೋಪ ವ್ಯಕ್ತಪಡಿಸಿದ್ದರು.

SCROLL FOR NEXT