ದೆಹಲಿ ಪೊಲೀಸ್ ನೂತನ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಅಲೋಕ್ ಕುಮಾರ್ ವರ್ಮಾ
ನವದೆಹಲಿ: ದೆಹಲಿ ಪೊಲೀಸ್ ನೂತನ ಆಯುಕ್ತರಾಗಿ ಅಲೋಕ್ ಕುಮಾರ್ ವರ್ಮಾ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.
1977 ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿರುವ ಬಸ್ಸಿ ಇಂದು ನಿವೃತ್ತಿಯಾಗಿದ್ದು, ಅಲೋಕ್ ಕುಮಾರ್ ವರ್ಮಾ ಅವರು ದೆಹಲಿ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
1979ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿರುವ ಅಲೋಕ್ ಕುಮಾರ್, ದೆಹಲಿಯಲ್ಲಿ ವಿಶೇಷ ಪೊಲೀಸ್ ಆಯುಕ್ತರಾಗಿ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಆಯುಕ್ತರಾಗಿ ಮಾತ್ರವಲ್ಲದೇ ಪಾಂಡಿಚೇರಿ ಹಾಗೂ ಮಿಜೋರಾಂನಲ್ಲಿ ಡಿಜಿಯಾಗಿ ಸೇವೆ ಸಲ್ಲಿಸಿದ್ದಾರೆ. 2017ರವರೆಗೆ ತನ್ನ ಕಾರ್ಯನಿರ್ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿವೃತ್ತಿಯಾಗಿರುವ ಭೀಮ್ ಸೇನ್ ಬಸ್ಸಿ ಕೇಂದ್ರ ಮಾಹಿತಿ ಆಯೋಗದಲ್ಲಿ ತೆರವಾಗಿರುವ ಮಾಹಿತಿ ಆಯುಕ್ತ ಸ್ಥಾನದ ಆಕಾಂಕ್ಷಿಯಾಗಿದ್ದಾರೆ ಎಂದೂ ಹೇಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ಮಾಹಿತಿ ಆಯುಕ್ತರ ನೇಮಕ ಮಾಡಲಿದ್ದು ಭೀಮ್ ಸೇನ್ ಬಸ್ಸಿ ಸಹ ಆಕಾಂಕ್ಷಿಯಾಗಿದ್ದು ಸಂಪುಟ ಕಾರ್ಯದರ್ಶಿ ಪಿಕೆ ಸಿನ್ಹಾ ನೇತೃತ್ವದ ಶೋಧನಾ ಸಮಿತಿ ನವೆಂಬರ್ ನಲ್ಲಿ ಬಸ್ಸಿ ಅವರ ಹೆಸರನ್ನು ಆಯ್ಕೆ ಪಟ್ಟಿಯಲ್ಲಿ ಸೇರಿಸಿದ್ದಾರೆ ಎಂಬುದು ಪಿಟಿಐ ವರದಿ ಮೂಲಕ ಬಹಿರಂಗವಾಗಿದೆ.