ಪಠಾಣ್‌ಕೋಟ್: ಪಾಕಿಸ್ತಾನದೊಂದಿಗೆ ಸೌಹಾರ್ದತೆ ಬೆಳೆಸಲು ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ನಿಲುವುಗಳಿಗೆ ಸಿಕ್ಕ ಉತ್ತರವೇ ಪಂಜಾಬ್‌ನಲ್ಲಿ ನಡೆದ ಉಗ್ರರ ದಾಳಿ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಹೇಳಿದ್ದಾರೆ.
ಭಯೋತ್ಪಾದನೆ ಮತ್ತು ಮಾತುಕತೆಯನ್ನು ಜತೆಯಾಗಿ ಸಂಭಾಳಿಸಲು ಆಗುವುದಿಲ್ಲ ಎಂಬವ ಬಿಜೆಪಿಯ ನಿಲುವು ಸರಿಯಾಗಿದೆ. ಆದರೆ ಇಂಥಾ ದಾಳಿಗಳು ನಡೆಯುತ್ತಿರುವಾಗ ಭಾರತ ಮತ್ತು ಪಾಕ್ ನಡುವಿನ ಮಾತುಕತೆಗಳನ್ನು ದೂರವಿರಿಸುವುದು ಉತ್ತಮ ಎಂದು ಒಮರ್ ಸಲಹೆ ನೀಡಿದ್ದಾರೆ.
ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿರುವ ಭಾರತೀಯ ವಾಯುನೆಲೆ ಮೇಲೆ ಉಗ್ರರು ಶನಿವಾರ ಮುಂಜಾನೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ನಾಲ್ವರು ಉಗ್ರರು ಹತ್ಯೆಯಾಗಿದ್ದಾರೆ.