ನವದೆಹಲಿ: ಶನಿವಾರ ಮುಂಜಾನೆ ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿರುವ ಭಾರತೀಯ ವಾಯುನೆಲೆ ಮೇಲೆ ಉಗ್ರ ದಾಳಿ ನಡೆದ ಹಿನ್ನಲೆಯಲ್ಲಿ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಇಂದು ಸಂಜೆ ಭದ್ರತಾ ಅಧಿಕಾರಿಗಳ ಉನ್ನತ ಮಟ್ಟದ ಸಭೆ ಕರೆದಿದ್ದಾರೆ.
ಶನಿವಾರ ಮುಂಜಾನೆ 3.30ರ ವೇಳೆಗೆ ವಾಯುನೆಲೆ ಮೇಲೆ ಉಗ್ರ ದಾಳಿ ನಡೆದಿದ್ದು, ಬೆಳಗ್ಗೆ 9 ಗಂಟೆಯ ವರೆಗೆ ಕಾದಾಟ ಮುಂದುವರಿದಿತ್ತು. ಈ ಗುಂಡಿನ ಕಾಳಗದಲ್ಲಿ ನಾಲ್ವರು ಉಗ್ರರು ಹತರಾಗಿದ್ದು, ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.
ಪರಿಕ್ಕರ್ ಅವರೀಗ ಗೋವಾದಲ್ಲಿದ್ದು ಅಲ್ಲಿಂದಲೇ ವಾಯುಸೇನೆಯ ಮುಖ್ಯಸ್ಥ ಅರೂಪ್ ರಾಹಾ ಮತ್ತು ಇನ್ನಿತರ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ಕೆಲವೇ ಹೊತ್ತಲ್ಲಿ ಪರಿಕ್ಕರ್ ದೆಹಲಿಗೆ ಆಗಮಿಸಲಿದ್ದು, ನಂತರ ಈ ಸಭೆ ನಡೆಯಲಿದೆ.