ದೇಶ

2 ವರ್ಷದ ಮಗುವಿನ ಜೀವ ಉಳಿಸಿದ ರೈಲ್ವೆ ಸಚಿವ ಸುರೇಶ್ ಪ್ರಭು

Shilpa D

ನವದೆಹಲಿ: ಸಂಕಷ್ಟದಲ್ಲಿದ್ದ ಮಹಿಳಾ ಪ್ರಯಾಣಿಕರೊಬ್ಬರ ಟ್ವೀಟ್ ಗೆ ಸ್ಪಂದಿಸಿ ಹಸುಗೂಸಿಗೆ ಹಾಲಿನ ವ್ಯವಸ್ಥೆ ಮಾಡಿಸಿದ್ದ ರೈಲ್ವೆ ಸಚಿವ ಸುರೇಶ್ ಪ್ರಭು ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ.

ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿದ್ದ ಎರಡು ವರ್ಷದ ಮಗುವಿಗೆ  ವೈದ್ಯರಿಂದ ತುರ್ತು ಚಿಕಿತ್ಸೆ ಕೊಡಿಸಿದ್ದಾರೆ. ಬಾಗಲ್ಪುರ್-ಬೆಂಗಳೂರು ಆಂಗಾ ಎಕ್ಸ್ ಪ್ರೆಸ್ ರೈಲಿನಲ್ಲಿ  ಶಂಕರ್ ಪಂಡಿತ್ ಎಂಬ ಎಂಜಿನೀಯರ್ ಬಿಹಾರದಿಂದ ಬೆಂಗಳೂರಿಗೆ ತಮ್ಮ ಪತ್ನಿ ಹಾಗೂ ಎರಡು ವರ್ಷದ ಪುತ್ರಿಯೊಂದಿಗೆ ಪ್ರಯಾಣಿಸುತ್ತಿದ್ದರು.

ಬುಧವಾರ ಪ್ರಯಾಣ ಆರಂಭಿಸಿದ್ದ ಕುಟುಂಬ ಶನಿವಾರ ಬೆಂಗಳೂರಿಗೆ ತಲುಪಲಿತ್ತು. ಈ ವೇಳೆ ಎರಡು ವರ್ಷದ ಬಾಲಕಿ ಬಂಗಾಸಿಖಳಿಗೆ  ಆರೋಗ್ಯ ಸಮಸ್ಯೆ ಉಂಟಾಗಿದೆ. ಬೇಧಿಯೂ ಆರಂಭವಾಯಿತು. ನಮಗೆ ಏನು ಮಾಡಬೇಕೆಂಬುದೇ ತೋಚಲಿಲ್ಲ. ಇತರೆ ಪ್ರಯಾಣಿಕರು ಸಹಕರಿಸಿದರಾದರೂ ಮಗುವಿನ ಆರೋಗ್ಯ ಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಮಧ್ಯದಲ್ಲೇ ಯಾವುದಾದರೂ ಸ್ಟೇಷನ್‌ನಲ್ಲಿ ಇಳಿಯೋಣ ಎಂದರೆ ನಮ್ಮ ಬಳಿ ಸಾಕಷ್ಟು ಲಗೇಜ್ ಇತ್ತು. ಆ ಕೂಡಲೇ ರೈಲ್ವೆ ಸಚಿವರಿಗೆ ಟ್ವೀಟ್ ಮಾಡಿದೆ. ಕೆಲವೇ ನಿಮಿಷಗಳಲ್ಲಿ ರೈಲ್ವೆ ಸಚಿವರ ಕಚೇರಿಯಿಂದ ಕರೆ ಬಂತು. ನಂತರ ಒಂದು ವೈದ್ಯರ ತಂಡ ಬಂದು ಮಗುವನ್ನು ಪರೀಕ್ಷಿಸಿ ಅಸಾನೋಲ್ ರೈಲು ನಿಲ್ದಾಣದಲ್ಲಿ ಚಿಕಿತ್ಸೆ ಕೊಡಿಸಿದರು. ಅಂಥದ್ದೊಂದು ಅದ್ಭುತ ಸ್ಪಂದನೆಯನ್ನು ನಾನೆಂದೂ ಕಂಡಿರಲಿಲ್ಲ. ನನಗೆ ಬಹಳ ಹೆಮ್ಮೆಯಾಯಿತು,'' ಎಂದು ಶಂಕರ್ ಪಂಡಿತ್ ಸುರೇಶ್ ಪ್ರಭು ಅವರನ್ನು ಕೊಂಡಾಡಿದ್ದಾರೆ.

ರೈಲ್ವೆ ಸಚಿವರ ಸ್ಪಂದನೆಗೆ ಪುಳಕಿತರಾಗಿರುವ ಪೋಷಕರು ''ನಮ್ಮ ಮಗಳು ಚೇತರಿಸಿಕೊಂಡಿದ್ದಾಳೆ. ರೈಲ್ವೆ ಇಲಾಖೆಗೆ ಧನ್ಯವಾದಗಳು. ರೈಲ್ವೆ ಸಚಿವರು ನಮ್ಮ ಮಗಳನ್ನು ಮಾತ್ರ ಉಳಿಸಲಿಲ್ಲ. ಬದಲಿಗೆ ಬೆಂಗಳೂರಿಗೆ ಹೋಗಲು ಟಿಕೆಟ್ ಅನ್ನೂ ದೃಢಪಡಿಸಿದರು,'' ಎಂದು ಭಾವುಕರಾದರು.  

SCROLL FOR NEXT