ನವದೆಹಲಿ: ಸಿಪಿಐ(ಎಂ) ನ ಹಿರಿಯ ನಾಯಕ ಎ.ಬಿ.ಬರ್ದಾನ್ ನಿಧನಕ್ಕೆ ಸಂತಾಪ ಸೂಚಿಸಿರುವ ಬಿಜೆಪಿ ಹಿರಿಯ ನಾಕಯ ಎಲ್.ಕೆ ಅಡ್ವಾಣಿ, ಬರ್ದಾನ್ ಅವರನ್ನು ಬಡವರ ಧ್ವನಿ ಎಂದು ಬಣ್ಣಿಸಿದ್ದಾರೆ.
ಬರ್ದಾನ್ ನಿಧನದ ಸುದ್ದಿ ಕೇಳಿ ದುಃಖವಾಗಿದೆ ಎಂದಿರುವ ಅಡ್ವಾಣಿ, ಬರ್ದಾನ್ ಅವರು ತಮ್ಮ ಸಿದ್ಧಾಂತಗಳಿಗೆ ಬದ್ಧವಾಗಿದ್ದರು. ಕಾರ್ಮಿಕ ಒಕ್ಕೂಟದ ಪ್ರಮುಖ ನಾಯಕರಾಗಿ, ಬಡವರ ಧ್ವನಿಯಾಗಿದ್ದರು. ಅತ್ಯುತ್ತಮ ವಾಗ್ಮಿಗಳಾಗಿ ಸದಾ ನೆನಪಿನಲ್ಲಿರುತ್ತಾರೆ ಎಂದು ಹೇಳಿದ್ದಾರೆ.
ಬರ್ದಾನ್ ಅವರ ರಾಜಕೀಯ ರೈತರು ಹಾಗೂ ಕಾರ್ಮಿಕರ ಕೇಂದ್ರಿತವಾಗಿರುತ್ತಿತ್ತು. ದೇಶದ ಜಾತ್ಯಾತೀತತೆಯನ್ನು ಕಾಪಾಡುವುದು ಅವರ ಬದ್ಧತೆಗಳಲ್ಲಿ ಒಂದಾಗಿತ್ತು, ಹೋರಾಟಗಳ ಮೂಲಕವೇ ರಾಜಕೀಯ ಹಾಗೂ ಸಾಮಾಜಿಕವಾಗಿ ಬರ್ದಾನ್ ತಮ್ಮನ್ನು ಗುರುತುಸಿಕೊಂಡಿದ್ದರು ಎಂದಿದ್ದಾರೆ.