ದೇಶ

ವಿದ್ಯಾರ್ಥಿಗಳಿಗೆ ರಾಷ್ಟ್ರಗೀತೆ ಹಾಡಲು ಹೇಳಿದ ಮುಖ್ಯಶಿಕ್ಷಕನ ಮೇಲೆ ಹಲ್ಲೆ ನಡೆಸಿ ಮದರಸಾದಿಂದ ಹೊರಗಟ್ಟಿದರು!

Srinivas Rao BV

ಕೋಲ್ಕತ್ತಾ: ಜನವರಿ 26 ರಂದು ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ರಾಷ್ಟ್ರಗೀತೆ ಹಾಡುವುದಕ್ಕೆ ತರಬೇತಿ ನೀಡುತ್ತಿದ್ದ ಮದರಸಾದ ಮುಖ್ಯಶಿಕ್ಷಕ ಕಾಜಿ ಮಸುಂ ಅಕ್ತರ್ ಅವರನ್ನು ಮದರಸಾದಿಂದ ಹೊರಗಟ್ಟಿರುವ ಘಟನೆ  ಕೋಲ್ಕತ್ತಾದ ತಲ್ಪುಕುರ್ ಮದರಸಾದಲ್ಲಿ ನಡೆದಿದೆ.
ಕೋಲ್ಕತ್ತಾದ ತಲ್ಪುಕುರ್ ಆರ ಹೈ ಮದರಸಾ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಾಗಿದೆ. ಗಣರಾಜ್ಯೋತ್ಸವ ದಿನದಂದು ರಾಷ್ಟ್ರಗೀತೆಯನ್ನು ಹಾಡಲು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದ ಮುಖ್ಯಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದ ತೀವ್ರವಾದಿ ಮುಸ್ಲಿಂ ಧರ್ಮಗುರುಗಳು ಐಸಿಸ್ ನ್ನು ನೆಲೆಯನ್ನು ಗಟ್ಟಿಗೊಳಿಸಲು ಯತ್ನಿಸುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಹಲ್ಲೆಗೊಳಗಾದ ಮುಖ್ಯಶಿಕ್ಷಕ ಕಾಜಿ ಮಸುಂ ಅಕ್ತರ್  ಘಟನೆಯನ್ನು ಹಲವು ಬಾರಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅವರ ಗಮನಕ್ಕೆ ತಂದಿದ್ದರೂ ಯಾವುದೇ  ಪ್ರಯೋಜನವಾಗಿಲ್ಲ.
ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ವಿರೋಧಿಸಿರುವ ಮೌಲ್ವಿಗಳು, ರಾಷ್ಟ್ರಗೀತೆಯನ್ನು ಹಿಂದುತ್ವದ ಹಾಡು ಎಂದು ಕಾಜಿ ಮಸುಂ ಅಕ್ತರ್ ಅವರ ವಿರುದ್ಧ ಫತ್ವಾ ಹೊರಡಿಸಿದ್ದಾರೆ. ಅಲ್ಲದೇ ಸಾಂಪ್ರದಾಯಿಕ ಮುಸ್ಲಿಮರಂತೆ ಬಟ್ಟೆ ಧರಿಸಿ, ಗಡ್ಡ ಬೆಳೆಸುವವರೆಗೂ ಶಾಲೆಯ ಸುತ್ತಮುತ್ತಲ ಪ್ರದೇಶವನ್ನು ಪ್ರವೇಶಿಸದಂತೆ ಅಕ್ತರ್ ವಿರುದ್ಧ ಮದರಸಾದ ಮೌಲ್ವಿಗಳು ಫತ್ವಾ ಹೊರಡಿಸಿದ್ದಾರೆ.    
ಇಸ್ಲಾಮಿಕ್ ಸಂಸ್ಥೆಯೊಂದರಲ್ಲಿ ರಾಶ್ಟ್ರಗೀತೆಯನ್ನು ಹಾಡುವುದು ತ್ರಿವರ್ಣ ಧ್ವಜ ಹಾರಿಸುವುದು ಇಸ್ಲಾಂಗೆ ವಿರುದ್ಧವಾಗಿದೆ ಎಂದು ಮೌಲ್ವಿಗಳು ಹೇಳಿದ್ದಾರೆ. ಈ ಘಟನಾವಳಿಗಳ ಬಗ್ಗೆ ಕೋಲ್ಕತ್ತಾ ಪೊಲೀಸ್ ಕಮಿಷನರ್ ಅಲ್ಪಸಂಖ್ಯಾತ ಆಯೋಗಕ್ಕೆ ಪತ್ರವನ್ನೂ ಬರೆದಿದ್ದು ಮದರಸಾ ಪ್ರದೇಶದಲ್ಲಿ ತಾವು ಉಪಸ್ಥಿತರಿದ್ದರೆ ಕೋಮು ಘರ್ಷಣೆಗೆ ಕಾರಣವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಕ್ತರ್ ಅವರಿಗೆ ಕನಿಷ್ಠ ಭದ್ರತೆಯನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ.
ಈ ಹಿಂದೆಯೂ ಹಲವು ಬಾರಿ ಕಾಜಿ ಮಸುಂ ಅಕ್ತರ್ ಅವರಿಗೆ ಮೂಲಭೂತವಾದಿಗಳಿಂದ ಸಮಸ್ಯೆ ಎದುರಾಗಿರುವ ಘಟನೆಗಳು ನಡೆದಿವೆ.

SCROLL FOR NEXT