ಗುರ್‌ಸೇವಕ್ ಸಿಂಗ್ ಪಾರ್ಥಿವ ಶರೀರ
ಅಂಬಾಲ(ಹರಿಯಾಣ): ಪಠಾಣ್‌ಕೋಟ್ ಉಗ್ರ ದಾಳಿಯಲ್ಲಿ ಹುತಾತ್ಮರಾದ ಗರುಡ್ ಕಮಾಂಡೋ ಗುರ್‌ಸೇವಕ್ ಸಿಂಗ್ ಅವರ ಸ್ಮಾರಕ ನಿರ್ಮಾಣ ಮಾಡುವುದಾಗಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಮಂಗಳವಾರ ಹೇಳಿದ್ದಾರೆ.
ಇಂದು ಗಾರ್ನಾಲ ಗ್ರಾಮದಲ್ಲಿ ಹುತಾತ್ಮ ಯೋಧನ ಕುಟುಂಬವನ್ನು ಭೇಟಿ ಮಾಡಿ, ಸಾಂತ್ವನ ಹೇಳಿದೆ ಹರಿಯಾಣ ಸಿಎಂ, ಸ್ಮಾರಕ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು. ಈ ವೇಳೆ ಅಂಬಾಲ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಆರೋಗ್ಯ ಸಚಿವ ಅನಿಲ್ ವಿಜ್ ಅವರು ಇದ್ದರು.
25 ವರ್ಷದ ಗುರ್‌ಸೇವಕ್ ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿ ಕೊಟ್ಟಿದ್ದಾರೆ. ಅವರ ಬಗ್ಗೆ ಇಡೀ ದೇಶಕ್ಕೆ ಹೆಮ್ಮೆ ಇದೆ. ಅವರ ಕುಟುಂಬ ರಕ್ಷಣಾ ಪಡೆಗೆ ಅಪಾರ ಕೊಡುಗೆ ನೀಡಿದೆ. ಗುರ್‌ಸೇವಕ್ ಅವರ ಹಿರಿಯ ಸಹೋದರ ಹರ್ದೀಪ್ ಸಿಂಗ್ ಅವರು ಸೇನೆಯಲ್ಲಿದ್ದು, ಅವರ ತಂದೆ ಸಹ ಮಾಜಿ ಸೈನಿಕರು ಎಂದು ಖಟ್ಟರ್ ಹೇಳಿದರು.
ಕಳೆದ ತಿಂಗಳಷ್ಟೇ ವಿವಾಹವಾಗಿದ್ದ ಗುರ್‌ಸೇವಕ್ ಸಿಂಗ್ ಅವರು, ಭಾನುವಾರ ಪಠಾಣ್‌ಕೋಟ್ ವಾಯುನೆಲೆ ಮೇಲೆ ನಡೆದ ಉಗ್ರರ ದಾಳಿಯ ವೇಳೆ ಹುತಾತ್ಮರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics