ಮುಂಬೈ: ಸುಪ್ರೀಂಕೋರ್ಟ್‍ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್.ಎಚ್.ಕಪಾಡಿಯಾ (68) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕಳೆದ ರಾತ್ರಿ ಅವರು ಕೊನೆಯುಸಿರೆಳೆದರು ಎಂದು ಬಾಂಬೆ ಹೈಕೋರ್ಟ್ ಮೂಲಗಳು ತಿಳಿಸಿವೆ. ಅವರು ಪತ್ನಿ, ಪುತ್ರರನ್ನು ಅಗಲಿದ್ದಾರೆ. ದಕ್ಷಿಣ ಮುಂಬೈನಲ್ಲಿ ಪಾರ್ಸಿ ಸಂಪ್ರದಾಯ ಪ್ರಕಾರ ಅವರ ಅಂತ್ಯ ಕ್ರಿಯೆ ನಡೆಯಿತು.
1947ರಲ್ಲಿ ಜನಿಸಿದ ಅವರು, 2003ರ ಆ.5ರಂದು ಉತ್ತರಾಖಂಡದ ಹೈಕೋರ್ಟ್ ಮುಖ್ಯ ನ್ಯಾಯಮೂತಿರ್ ಗಳಾದರು. 2010ರ ಮೇ 12ರಿಂದ 2012ರ ಸೆ.28ರವರೆಗೆ ಸುಪ್ರೀಂನ 38ನೇ ಮುಖ್ಯನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿದರು.
ಪಿ.ಜೆ. ಥಾಮಸ್‍ರನ್ನು ಜಾಗೃತ ದಳದ ಮುಖ್ಯ ಆಯುಕ್ತರಾಗಿ ನೇಮಕ ಮಾಡಿದ್ದನ್ನು ವಜಾ ಮಾಡಿದ್ದು ಸೇರಿದಂತೆ ಪ್ರಮುಖ ತೀರ್ಪುಗಳನ್ನು ಅವರು ನೀಡಿದ್ದಾರೆ.