ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಭದ್ರತೆ ಕಡಿತಗೊಳಿಸಿದ ಮುಂಬೈ ಪೊಲೀಸರ ತೀರ್ಮಾನ ಸ್ವಾಗತಾರ್ಹ: ಅಮೀರ್ ಖಾನ್

ತನ್ನ ಭದ್ರತೆ ಕಡಿತಗೊಳಿಸಿದ ಮುಂಬೈ ಪೊಲೀಸರ ತೀರ್ಮಾನವನ್ನು ನಾನು ಸ್ವಾಗತಿಸುತ್ತೇನೆ ಎಂದು ಬಾಲಿವುಡ್ ನಟ ಅಮೀರ್ ಖಾನ್ ಹೇಳಿದ್ದಾರೆ. ತನಗೆ ಭದ್ರತೆ...

ಅಮೀರ್ ಖಾನ್
Rashmi Kasaragodu
Updated On : 8 Jan 2016, 8:15 am
ಮುಂಬೈ: ತನ್ನ ಭದ್ರತೆ ಕಡಿತಗೊಳಿಸಿದ ಮುಂಬೈ ಪೊಲೀಸರ ತೀರ್ಮಾನವನ್ನು ನಾನು ಸ್ವಾಗತಿಸುತ್ತೇನೆ ಎಂದು ಬಾಲಿವುಡ್ ನಟ ಅಮೀರ್ ಖಾನ್ ಹೇಳಿದ್ದಾರೆ. ತನಗೆ ಭದ್ರತೆ ಕಡಿಮೆಗೊಳಿರುವುದರಿಂದ ಪೊಲೀಸರನ್ನು ಇನ್ನಿತರ ಒಳ್ಳೆಯ ಕಾರ್ಯಗಳಿಗೆ ನಿಯೋಜನೆ ಮಾಡಬಹುದು. ಇನ್ಮುಂದೆ ನನಗೆ ಭದ್ರತೆ ಬೇಕೆಂದೆನಿಸಿದಾಗ ಪೊಲೀಸರು ಆ ಕಾರ್ಯವನ್ನು ಮಾಡುತ್ತಾರೆ. ಮುಂಬೈ ಪೊಲೀಸರ ಮೇಲೆ ನನಗೆ ವಿಶ್ವಾಸವಿದೆ ಎಂದು ಅಮೀರ್ ಖಾನ್ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.
ಆದರೆ ಬಾಲಿವುಡ್ ನಟರಾದ ಅಮೀರ್ ಖಾನ್, ಶಾರುಖ್ ಖಾನ್ ಮೊದಲಾದವರ ಭದ್ರತೆಯಲ್ಲಿ ಕಡಿತ ಮಾಡಲಾಗಿಲ್ಲ ಎಂದು ಮುಂಬೈ ಪೊಲೀಸರು ಹೇಳಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement