ದೇಶ

ಶಾಲೆಗೆ ಬರುವ ಮಕ್ಕಳ ಊಟದ ಡಬ್ಬಿ ಪರಿಶೀಲಿಸಿ: ಸಿಬಿಎಸ್ಇ

Manjula VN

ನವದೆಹಲಿ: ಮಕ್ಕಳ ಆರೋಗ್ಯಕ್ಕೆ ಮಾರಕವಾಗಿರ ಪರಿಣಮಿಸಿತ್ತಿರುವ ಎಣ್ಣೆ ಪದಾರ್ಥಗಳು, ಚಿಪ್ಸ್, ರೆಡಿ-ಟು-ಈಟ್ ನೂಡಲ್ಸ್ ಮುಂತಾದ ಜಂಕ್ ಫುಡ್ ಗಳನ್ನು ಮಕ್ಕಳು ತಿನ್ನದಂತೆ ಎಚ್ಚರವಹಿಸುವಂತೆ ಶಾಲಾ ಸಿಬ್ಬಂದಿಗಳಿಗೆ ಸಿಬಿಎಸ್ಇ ಸುತ್ತೋಲೆ ಹೊರಡಿಸಿದೆ.

ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರವಹಿಸಿರುವ ಸಿಬಿಎಸ್ಇ ಇದೀಗ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಜಂಕ್ ಫುಡ್ ಗಳನ್ನು ಶಾಲೆಯ ಕ್ಯಾಂಟೀನ್ ಮತ್ತು ಶಾಲೆಯ ಆವರಣದ ಸುತ್ತಮುತ್ತ 200 ಮೀಟರ್ ವರೆಗೆ ಮಾರಾಟ ಮಾಡಬಾರದು ಎಂದು ಹೇಳಿದೆ, ಅಲ್ಲದೆ, ಶಾಲೆಗೆ ಬರುವ ಮಕ್ಕಳ ಊಟದ ಡಬ್ಬಿಗಳನ್ನು ಪರಿಶೀಲನೆ ಮಾಡುನಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಿದೆ.

ಈ ಹಿಂದೆಯೂ ಜಂಕ್ ಫುಡ್ ಗಳನ್ನು ಶಾಲೆಯ ಆವರಣದಲ್ಲಿ ಮಾರಾಟ ಮಾಡಬಾರದು ಎಂದು ಸಿಬಿಎಸ್ಇ ಸೂಚನೆ ನೀಡಿತ್ತು. ಆದರೂ, ಮಕ್ಕಳಿಗೆ ಇಷ್ಟವಾಗುವ ಕುರುಕಲು ತಿಂಡಿಗಳನ್ನು ಶಾಲಾ ಆವರಣದಲ್ಲೇ ಮಾರಾಟ ಮಾಡಲಾಗುತ್ತಿತ್ತು. ಇದೀಗ ಮತ್ತೆ ಮಕ್ಕಳ ಆರೋಗ್ಯದ ಎಚ್ಚರಿಕೆವಹಿಸಿರುವ ಸಿಬಿಎಸ್ಇ ಬೊಜ್ಜು, ಉಪ್ಪು, ಸಕ್ಕರೆ ಹೆಚ್ಚಾಗಿರುವ ಆಹಾರ ಪದಾರ್ಥಗಳು ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹೇಳಿದ್ದು, ಟೈಪ್ 11 ಡಯಾಬಿಟಿಸ್, ಹೈಪರ್ ಟೆನ್ಶನ್ ಗಳನ್ನು ಉಂಟು ಮಾಡಲಿದೆ ಎಂದು ಎಚ್ಚರ ನೀಡಿದ ಸುತ್ತೋಲೆಯೊಂದನ್ನು ಹೊರಡಿಸಿದೆ. ಅಲ್ಲದೆ, ಶಾಲೆಗಳಲ್ಲಿ 10 ಸದಸ್ಯರುಳ್ಳ ಶಾಲೆ ಕ್ಯಾಂಟೀನ್ ಮ್ಯಾನೇಜ್ ಮೆಂಟ್ ಕಮಿಟಿ ಸ್ಥಾಪಿಸಿ ಇಲ್ಲಿ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು, ಶಾಲಾ ಕ್ಯಾಂಟೀನ್ ಆಪರೇಟರ್ ಗಳು ಸದಸ್ಯರಾಗುವಂತೆ ಸಲಹೆ ನೀಡಿದೆ.

SCROLL FOR NEXT