ಯುವಿ, ಭಜ್ಜಿ ಆಸ್ತಿ ಮೇಲೆ ಕಣ್ಣು
ಪಲ್ರ್ಸ್ ಗ್ರೂಪ್ನ ಬಹುಕೋಟಿ ಹಗರಣದಲ್ಲಿ ಕ್ರಿಕೆಟರ್ಗಳಾದ ಯುವರಾಜ್ ಸಿಂಗ್ ಮತ್ತು ಹರ್ಬಜನ್ ಸಿಂಗ್ ಅವರ ಹೆಸರುಗಳು...
ಪಂಜಾಬ್: ಪಲ್ರ್ಸ್ ಗ್ರೂಪ್ನ ಬಹುಕೋಟಿ ಹಗರಣದಲ್ಲಿ ಕ್ರಿಕೆಟರ್ಗಳಾದ ಯುವರಾಜ್ ಸಿಂಗ್ ಮತ್ತು ಹರ್ಬಜನ್ ಸಿಂಗ್ ಅವರ ಹೆಸರುಗಳು ಕೇಳಿ ಬಂದಿದೆ.
ಹೀಗಾಗಿ ಇಬ್ಬರ ಆಸ್ತಿಯನ್ನು ಸಿಬಿಐ ಅಧಿಕಾರಿಗಳು ಪರಿಶೀಲನೆಗೊಳಪಡಿಸುವ ಸಾಧ್ಯತೆಗಳಿವೆ. ಈ ಬಗ್ಗೆ ಕ್ರಿಕೆಟ್ಕಂಟ್ರಿ.ಕಾಂ (http://www.cricketcountry.com) ವರದಿ ಮಾಡಿದೆ.
ಹಗರಣಕ್ಕೆ ಸಂಬಂಧಿಸಿದಂತೆ ಪಲ್ರ್ಸ್ ಗ್ರೂಪನ ಮುಖ್ಯಸ್ಥ ನಿರ್ಮಲ್ ಸಿಂಗ್ ಭಂಗೂರನ್ನು ವಾರದ ಹಿಂದಷ್ಟೇ ಸಿಬಿಐ ಬಂಧಿಸಿತ್ತು. ಕಂಪನಿಗೆ, ಸಿನಿಮಾ ಮತ್ತು ಕ್ರಿಕೆಟ್ ರಂಗದ ಸೆಲೆಬ್ರಿಟಿಗೊಳೊಂದಿಗೆ ನಂಟಿದೆ ಎಂಬುದನ್ನು ಸಿಬಿಐ ಕಂಡುಕೊಂಡಿತ್ತು.
ಇದರಲ್ಲಿ ಯುವಿ, ಭಜ್ಜಿ ಹೆಸರೂ ಇದೆ. ಯುವಿ, ಭಜ್ಜಿ ಪಲ್ರ್ಸ್ ಗ್ರೂಪನಿಂದ ಮೊಹಾಲಿಯಲ್ಲಿ ಫ್ಲಾಟ್ ಉಡುಗೊರೆ ಪಡೆದಿದ್ದಾರೆ ಎನ್ನಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.