ಚೆನ್ನೈ: ಸುಪ್ರೀಂಕೋರ್ಟ್ ನಿಷೇಧ ಹೇರಿದ್ದ ತಮಿಳ್ನಾಡಿನ ಪರಂಪರಾಗತ ಕ್ರೀಡೆ ಜಲ್ಲಿಕಟ್ಟು ಗೆ ನಟ ಧನುಷ್ ಬೆಂಬಲ ಸೂಚಿಸಿದ್ದಾರೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಧನುಷ್ ತಮ್ಮ ಅಭಿಪ್ರಾಯ ತಿಳಿಸಿ, ಜಲ್ಲಿಕಟ್ಟುಗೆ ಬೆಂಬಲ ವ್ಯಕ್ತ ಪಡಿಸಿದ್ದಾರೆ.
ಜಲ್ಲಿಕಟ್ಟುಗೆ ಸಂಬಂಧಿಸಿದಂತೆ ನಾನು ಇದುವರೆಗೆ ಯಾವುದೇ ಅಭಿಪ್ರಾಯ ಹೇಳಿಲ್ಲ. ಆದರೆ ನಾನು ಜಲ್ಲಿಕಟ್ಟುವನ್ನು ಬೆಂಬಲಿಸುತ್ತಿದೇನೆ. ಪ್ರಾಣಿ ಸಂರಕ್ಷಣಾ ಸಂಘಟನೆಯಾದ ಪೇಟಾದೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ. ನಾನು ಪೇಟಾದ ಬ್ರಾಂಡ್ ಅಂಬಾಸಿಡರ್ ಕೂಡಾ ಅಲ್ಲ. ಒಬ್ಬ ಸಸ್ಯಾಹಾರಿಯಾಗಿರುವ ಕಾರಣ ಅವರು ನನಗೆ ಸನ್ಮಾನ ಮಾಡಿದ್ದಾರೆ ಅಷ್ಟೇ ಎಂದು ಧನುಷ್ ಟ್ವೀಟ್ ಮಾಡಿದ್ದಾರೆ.