ಹೈದ್ರಾಬಾದ್: ರೋಹಿತ್ ವೇಮುಲಾ ಹೈದ್ರಾಬಾದ್ ಕ್ಯಾಂಪಸ್‌ನಲ್ಲಿ ಆತ್ಮಹತ್ಯೆಗೆ ಶರಣಾದ ಮೊದಲ ವಿದ್ಯಾರ್ಥಿಯೇನೂ ಅಲ್ಲ. ಕಳೆದ 10 ವರ್ಷಗಳಲ್ಲಿ ಇಲ್ಲಿ ಹಲವಾರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
8 ದಲಿತ ವಿದ್ಯಾರ್ಥಿಗಳು ಇಲ್ಲಿ ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೋಹಿತ್ ಸೇರಿದರೆ ಇದು ಒಂಭತ್ತನೆಯದ್ದು.
ಇದೇ ವಿಶ್ವ ವಿದ್ಯಾನಿಲಯದಲ್ಲಿ ಈಗಾಗಲೇ 8 ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೀಗಿದ್ದರೂ ದಲಿತ ವಿದ್ಯಾರ್ಥಿಗಳ ಸಮಸ್ಯೆಯೇನು ಎಂಬುದನ್ನು ವಿವಿ ಅರಿತಿಲ್ಲ. ರೋಹಿತ್ ಸಾವಿನ ಮೂಲಕ ಇಲ್ಲಿನ ತಾರತಮ್ಯ ಬಹಿರಂಗವಾಗಿದೆ ಎಂದು ಯುನಿವರ್ಸಿಟಿ ಆಫ್ ಹೈದ್ರಾಬಾದ್ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಜುಹೈಲ್ ಕೆಪಿ ಹೇಳಿದ್ದಾರೆ.