ಸಾಂದರ್ಭಿಕ ಚಿತ್ರ 
ದೇಶ

ಇಸಿಸ್ ಉಗ್ರ ಸಂಘಟನೆ ದಮನಕ್ಕೆ ಸಜ್ಜಾಗುತ್ತಿದೆ ಹಿಂದೂ ಧರ್ಮಸೇನೆ

ಭಾರತದಲ್ಲಿ ಬೇರೂರಲು ಯತ್ನಿಸುತ್ತಿರುವ ಇಸಿಸ್‌ ಉಗ್ರ ಸಂಘಟನೆಯ ವಿರುದ್ಧ ಹೋರಾಡಲು ಉತ್ತರ ಪ್ರದೇಶದಲ್ಲಿ ಧರ್ಮ ಸೇನೆ ಸಜ್ಜುಗೊಳ್ಳುತ್ತಿದೆ.....

ನವದೆಹಲಿ: ಭಾರತದಲ್ಲಿ ಬೇರೂರಲು ಯತ್ನಿಸುತ್ತಿರುವ ಇಸಿಸ್‌ ಉಗ್ರ ಸಂಘಟನೆಯ ವಿರುದ್ಧ ಹೋರಾಡಲು ಉತ್ತರ ಪ್ರದೇಶದಲ್ಲಿ ಧರ್ಮ ಸೇನೆ ಸಜ್ಜುಗೊಳ್ಳುತ್ತಿದೆ.

ರಾಷ್ಟ್ರ ರಾಜಧಾನಿ ದೆಹಲಿಯ ಹೊರವಲಯದಿಂದ ಹಿಡಿದು ಉತ್ತರಾಖಂಡ ಗಡಿಯವರೆಗಿನ ಪ್ರದೇಶದಲ್ಲಿ ಸಕ್ರಿಯವಾಗಿರುವ ಹಿಂದು ಸ್ವಾಭಿಮಾನ ಸಂಘಟನೆಯು "ಧರ್ಮ ಸೇನೆ'ಯನ್ನು ಸಿದ್ಧಪಡಿಸುತ್ತಿದ್ದು ಈಗಾಗಲೇ ಸುಮಾರು 15,000 ಮಂದಿ ಈ ಸೇನೆಯ ಸದಸ್ಯರಾಗಿದ್ದಾರೆ.

2020 ರೊಳಗಾಗಿ ಉತ್ತರ ಪ್ರದೇಶದ ಪಶ್ಚಿಮ ಭಾಗವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಗುರಿಯನ್ನು ಇಸಿಸ್‌ ಉಗ್ರ ಸಂಘಟನೆ ಹೊಂದಿರುವುದಾಗಿ ಈಗಾಗಲೇ ಬಹಿರಂಗವಾಗಿದ್ದು, ಇಸಿಸ್‌ ಸವಾಲನ್ನು ಸಮರ್ಥವಾಗಿ ಎದುರಿಸಲು ಹಿಂದು ಸ್ವಾಭಿಮಾನ್‌ ಸಂಘಟನೆಯು ಪಶ್ಚಿಮ ಉತ್ತರ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಸಮರ ಕಲೆಯ ತರಬೇತಿ ಶಿಬಿರಗಳನ್ನು ಆರಂಭಿಸಿದೆ.

ಧರ್ಮ ಸೇನೆಯ ಸೈನಿಕರಾಗುವುದಕ್ಕೆ ವಿವಿಧ ಜಾತಿಗಳಿಗೆ ಸೇರಿದ ಮಹಿಳೆಯರು, ಪುರುಷರು ಮುಂದಾಗಿದ್ದಾರೆ. ಇವರನ್ನು ಮಾತ್ರವಲ್ಲದೆ ಎಂಟು ವರ್ಷ ಪ್ರಾಯದಷ್ಟು ಚಿಕ್ಕವರಿರುವ ಮಕ್ಕಳನ್ನೂ ಕೂಡ ಸೇನೆಗೆ ಸೇರಿಸಿಕೊಳ್ಳಲಾಗುತ್ತಿದೆ. ಧರ್ಮ ಸೈನಿಕರಿಗೆ ಕತ್ತಿ ವರಸೆ ಮಾತ್ರವಲ್ಲದೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುವ ರೀತಿ ನೀತಿಗಳನ್ನು ಕೂಡ ಕಲಿಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!

"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ