ಪೇಶಾವರ: ಪಾಕಿಸ್ತಾನ ಬಚಾ ಖಾನ್ ವಿಶ್ವ ವಿದ್ಯಾಲಯದ ಮೇಲೆ ಉಗ್ರರು ದಾಳಿ ನಡೆಸಿರುವುದನ್ನು ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು ಬುಧವಾರ ಖಂಡಿಸಿದ್ದಾರೆ.
ಉಗ್ರರ ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಮುಗ್ಧ ವಿದ್ಯಾರ್ಥಿಗಳನ್ನು ಹತ್ಯೆ ಮಾಡುತ್ತಿರುವವರಿಗೆ ನಿಜವಾಗಲೂ ನಂಬಿಕೆ ಹಾಗೂ ಧರ್ಮವಿಲ್ಲ. ದೇಶದಲ್ಲಿರುವ ಭಯೋತ್ಪಾದನಾ ಪಿಡಗನ್ನು ಅಳಿಸಿ ಹಾಕಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
ಇಂದು ಮುಂಜಾನೆ ಚರ್ಸಾದ್ದಾ ಜಿಲ್ಲೆಯಲ್ಲಿರುವ ಬಚಾ ಖಾನ್ ವಿಶ್ವವಿದ್ಯಾಲಯದ ಮೇಲೆ ಉಗ್ರರ ಗುಂಪೊಂದು ದಾಳಿ ನಡೆಸಿದ್ದು, ಈಗಾಗಲೇ 15ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದುಕೊಂಡಿದ್ದಾರೆ. ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿರುವ ಭದ್ರತಾ ಸಿಬ್ಬಂದಿಗಳು ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆಸುತ್ತಿದ್ದಾರೆ.