ಪಠಾಣ್‌ಕೋಟ್: ಪಾಕಿಸ್ತಾನದಿಂದ ಪಠಾಣ್‌ಕೋಟ್ ಗಡಿ ಪ್ರದೇಶದ ಮೂಲಕ ಭಾರತಕ್ಕೆ ನುಸುಳಲು ಯತ್ನಿಸಿದ ಮೂವರು ಶಂಕಿತರ ವಿರುದ್ಧ ಬಿಎಸ್‌ಎಫ್ ಯೋಧರು ಗುಂಡು ಹಾರಿಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಓರ್ವ ಸಾವಿಗೀಡಾಗಿದ್ದು, ಇನ್ನಿಬ್ಬರು ಓಡಿ ತಪ್ಪಿಸಿಕೊಂಡಿದ್ದಾರೆ. ಪ್ರಸ್ತುತ ಪ್ರದೇಶದಲ್ಲಿ ಮಂಜು ಆವರಿಸಿದ್ದು, ಈ
ಅವಕಾಶವನ್ನುಪಯೋಗಿಸಿಕೊಂಡೇ ಮೂವರು ಅಕ್ರಮ ಪ್ರವೇಶ ನಡೆಸಲು ಯತ್ನಿಸಿದ್ದಾರೆ. ಇವರು ಉಗ್ರರು ಹೌದೋ ಅಲ್ಲವೋ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಗಳು ಈವರೆಗೆ ಲಭ್ಯವಾಗಿಲ್ಲ.
ಬಿಎಸ್‌ಎಫ್ ಗುಂಡಿನ ದಾಳಿ ನಡೆಸುತ್ತಿದ್ದಂತೆ ಇನ್ನಿಬ್ಬರು ಪಾಕಿಸ್ತಾನಕ್ಕೆ ಮರಳಿದ್ದಾರೆ ಎಂದು ಬಿಎಸ್‌ಎಫ್ ಮೂಲಗಳು ಹೇಳಿರುವುದಾಗಿ ವರದಿಯಾಗಿದೆ. ಗುಂಡಿನ ದಾಳಿಯಲ್ಲಿ ಸಾವಿಗೀಡಾದವ ಮೃತದೇಹ ಪಾಕಿಸ್ತಾನದ ಗಡಿಯಲ್ಲೇ ಇದೆ. ನುಸುಳುವಿಕೆಯ ಬಗ್ಗೆ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಗಡಿಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.