ಮೃಣಾಲಿನಿ ಸಾರಾಭಾಯಿ 
ದೇಶ

ಖ್ಯಾತ ನರ್ತಕಿ ಮೃಣಾಲಿನಿ ಸಾರಾಭಾಯಿ ಇನ್ನಿಲ್ಲ

ಖ್ಯಾತ ನರ್ತಕಿ ಮೃಣಾಲಿನಿ ಸಾರಾಭಾಯಿ (97) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು...

ಅಹಮ್ಮದಾಬಾದ್: ಖ್ಯಾತ ನರ್ತಕಿ ಮೃಣಾಲಿನಿ ಸಾರಾಭಾಯಿ (97) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹಲವು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಬಾಹ್ಯಾಕಾಶ ಸಂಶೋಧನೆಯ ಪಿತಾಮಹನೆಂಬ ಬಿರುದು ಹೊಂದಿರುವ ವಿಜ್ಞಾನಿ ವಿಕ್ರಂ ಸಾರಾಭಾಯಿ ಅವರ ಪತ್ನಿ ಹಾಗೂ ಖ್ಯಾತ ನರ್ತಕಿ ಮಲ್ಲಿಕಾ ಸಾರಾಭಾಯಿ ಅವರ ಅಮ್ಮ ಈ ಮೃಣಾಲಿನಿ ಸಾರಾಭಾಯಿ.  ತಾಯಿಯ ನಿಧನ ಸುದ್ದಿಯನ್ನು ಮಲ್ಲಿಕಾ ಸಾರಾಭಾಯಿಯವರೇ ಫೇಸ್ಬುಕ್ ಮೂಲಕ ತಿಳಿಸಿದ್ದಾರೆ.
ಭಾರತದ ಶಾಸ್ತ್ರೀಯ ನೃತ್ಯಕಲೆಯನ್ನು ಜಗತ್ತಿಗೆ ಪರಿಚಯಿಸಿ, ಅದರ ಮಹತ್ವನನ್ನು ಸಾರಿದ ಮಹಾನ್ ಪ್ರತಿಭೆ ಮೃಣಾಲಿನಿ. 1949ರಲ್ಲಿ ಅಹಮ್ಮದಾಬಾದ್‌ನಲ್ಲಿ ದರ್ಪಣಂ ಎಂಬ ಕಲಾಕೇಂದ್ರವನ್ನು ಸ್ಥಾಪಿಸುವ ಮೂಲಕ ನೃತ್ಯ ಕಲೆಯ ಕಂಪನ್ನು ಪಸರಿಸಿದ್ದರು.
ಪಾಲಕ್ಕಾಡ್ ಆನಕ್ಕರ ವಡಕ್ಕತ್ ತರವಾಡು ಮನೆಯ ಡಾ. ಸ್ವಾಮಿನಾಥನ್ ಮತ್ತು ಅಮ್ಮ ಸ್ವಾಮಿನಾಥನ್ ಮಗಳಾಗಿರುವ ಮೃಣಾಲಿನಿ, ಐಎನ್‌ಎ ಸೇನೆಯಲ್ಲಿದ್ದ ಕ್ಯಾಪ್ಟನ್ ಲಕ್ಷ್ಮಿ ಅವರ ಸಹೋದರಿಯಾಗಿದ್ದಾರೆ.
1992ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!