ದೇಶ

ತಾಜ್ ಮಹಲ್ ಸ್ಫೋಟಿಸುವ ಬೆದರಿಕೆ ಹಾಕಿದ್ದ ಶಂಕಿತ ಉಗ್ರ ರೈಲಿನಿ೦ದ ಜಿಗಿದು ಪರಾರಿ

Srinivasamurthy VN

ವೆಲ್ಲೂರು: ವಿಶ್ವ ವಿಖ್ಯಾತ ಪ್ರವಾಸಿ ತಾಣ ತಾಜ್ ಮಹಲ್ ಅನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಬಂಧಿತ ಶಂಕಿತ ಉಗ್ರ ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪರಾರಿಯಾಗಿದ್ದಾನೆ.

ತಾಜ್‍ಮಹಲ್ ಸ್ಪೋಟಿಸುವುದಾಗಿ ಬೆದರಿಸಿದ್ದ ಶ೦ಕಿತ ಉಗ್ರ ತ್ರಿಪುರಾ ನಿವಾಸಿ ಸೈಯ್ಯದ್ ಅಹ್ಮದ್ ಅಲಿ ಪರಾರಿಯಾದ ಶಂಕಿತ ಉಗ್ರನಾಗಿದ್ದಾನೆ. ಸೈಯ್ಯದ್ ಅಹ್ಮದ್ ಅಲಿಯನ್ನು ಈ ಹಿಂದೆ  ತ್ರಿಪುರಾದಲ್ಲಿ ಬಂಧಿಸಲಾಗಿತ್ತು. ಕಳೆದ ಬುಧವಾರ ರಾತ್ರಿ ಅಹ್ಮದ್ ಅಲಿಯನ್ನು ನ್ಯಾಯಾಲಯದ ವಿಚಾರಣೆಗಾಗಿ ತಮಿಳುನಾಡಿನ ವೆಲ್ಲೂರಿನಿ೦ದ ಲಖನೌಗೆ ಕರೆದೊಯ್ಯುತ್ತಿದ್ದ ವೇಳೆ  ಚಲಿಸುತ್ತಿದ್ದ ರೈಲಿನಿ೦ದ ಜಿಗಿದು ಆತ ಪರಾರಿಯಾಗಿದ್ದಾನೆ. ಇಟರಾಸಿ ರೈಲ್ವೆ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ರಫ್ತಿಸಾಗರ್ ಸೂಪರ್ ಫಾಸ್ಟ್ ಏಕ್ಸ್ ಪ್ರೆಸ್ ರೈಲು ಚಲಿಸುತ್ತಿದ್ದ ವೇಳೆ 38  ವಷ೯ದ ಸೈಯದ್ ಅಹಮದ್ ಅಲಿ ಕೈಬೇಡಿ ಸಮೇತ ಜಿಗಿದು ತಪ್ಪಿಸಿಕೊ೦ಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

2015ರ ಅಕ್ಟೋಬರ್‍ನಲ್ಲಿ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು, ಅಜ್ಮೀರ್ ದರ್ಗಾ ಸೇರಿದಂತೆ ಪ್ರಮುಖ ಪ್ರದೇಶಗಳನ್ನು ಸ್ಪೋಟಿಸುವುದಾಗಿ ಬೆದರಿಕೆಯೊಡ್ಡಿದ್ದರಿ೦ದ ಆತನನ್ನು  ತ್ರಿಪುರದಲ್ಲಿ ಬ೦ಧಿಸಲಾಗಿತ್ತು. ತಪ್ಪಿಸಿಕೊಂಡಿರುವ ಸೈಯ್ಯದ್ ಅಹ್ಮದ್ ಅಲಿ ಬಂಧನಕ್ಕಾಗಿ ಪೊಲೀಸರು ವ್ಯಾಪಕ ಬಲೆ ಬೀಸಿದ್ದಾರೆ.

SCROLL FOR NEXT