ದೇಶ

11 ವರ್ಷಗಳ ನಂತರ ಲಖನೌ ಗೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿ ಮೋದಿ!

Srinivas Rao BV

ಲಖನೌ: ದೆಹಲಿಯ ಪ್ರಧಾನಿಗಾದಿಯನ್ನು ಉತ್ತರ ಪ್ರದೇಶದ ಮೂಲಕವೇ ತಲುಪಬೇಕೆಂಬ ಮಾತು ಚುನಾವಣೆ ಸಂದರ್ಭಗಳಲ್ಲಿ ಕೇಳಿರುತ್ತೀರಿ. ಆದರೆ ಕಳೆದ 11 ವರ್ಷಗಳಲ್ಲಿ ಭಾರತದ ಪ್ರಧಾನಿ ಉತ್ತರ ಪ್ರದೇಶದ ರಾಜಧಾನಿ ಲಖನೌ ಗೆ ಭೇಟಿಯೇ ನೀಡಿಲ್ಲ! ಅಟಲ್ ಬಿಹಾರಿ ವಾಜಪೇಯಿ ನಂತರ ಕಳೆದ 11 ವರ್ಷಗಳಲ್ಲಿ ಲಖನೌ ಗೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿ ನರೇಂದ್ರ ಮೋದಿ ಅಗಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಭಾರತೀಯ ವಾಯುಪಡೆ ವಿಮಾನ ಚೌಧರಿ ಚರಣ್ ಸಿಂಗ್ ಏರ್ ಪೋರ್ಟ್ ನಲ್ಲಿ ಬಂದಿಳಿಯಲಿದ್ದು, 11 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಉತ್ತರ ಪ್ರದೇಶದ ರಾಜಧಾನಿಗೆ ಬಂದಿಳಿಯುತ್ತಿದ್ದಾರೆ. ಒಂದು ಕಾಲದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರತಿನಿಧಿಸುತ್ತಿದ್ದ ಲಖನೌ ಲೋಕಸಭಾ ಕ್ಷೇತ್ರ ಮೋದಿ ಭೇಟಿ ವೇಳೆ ಹಲವು ಪ್ರಥಮಗಳಿಗೆ ಸಾಕ್ಷಿಯಾಗುತ್ತಿದೆ. ಮೊದಲನೇಯದ್ದು ಪ್ರಧಾನಿ ಭೇಟಿ ಆಗಿದ್ದರೆ ಎರಡನೆಯದ್ದು 2004 ರ ಚುನಾವಣೆಯಲ್ಲಿ ವಾಜಪೇಯಿ ಅವರು ನಾಮಪತ್ರ ಸಲ್ಲಿಸಲ್ಲು ಹಜ್ರತ್ ಗಂಜ್ ನಿಂದ ನಡೆಸಿದ ಬೃಹತ್ ರ್ಯಾಲಿ ನಂತರ ಪ್ರಧಾನಿ ನರೇಂದ್ರ ಮೋದಿ ಅವರೂ ಇದೇ ಮೊದಲ ಬಾರಿ ಹಜ್ರತ್  ಮಾರ್ಗದಲ್ಲಿ ರ್ಯಾಲಿ ಕೈಗೊಳ್ಳಲಿದ್ದಾರೆ.   
ಪ್ರಧಾನಿಯಾಗುವುದಕ್ಕೂ ಮುನ್ನ ನರೇಂದ್ರ ಮೋದಿ ಅವರು 2014 ರ ಮಾರ್ಚ್ 2 ರಂದು ಚುನಾವಣಾ ಪ್ರಚಾರಕ್ಕಾಗಿ ಲಖನೌ ಗೆ ಭೇಟಿ ನೀಡಿದ್ದರು. ಇದಕ್ಕೂ ಮುನ್ನ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 2005 ರ ಸೆ.1 ರಂದು ಲಖನೌ ಗೆ ಭೇಟಿ ನೀಡಿದ್ದರು.

SCROLL FOR NEXT