ದೇಶ

ನೇಪಾಳ ಸಂವಿಧಾನದ ತಿದ್ದುಪಡಿಯನ್ನು ಸ್ವಾಗತಿಸಿದ ಭಾರತ

Srinivas Rao BV

ನವದೆಹಲಿ: ನೇಪಾಳದ ನೂತನ ಸಂವಿಧಾನಕ್ಕೆ ತಿದ್ದುಪಡಿ ತಂದಿರುವ ಅಲ್ಲಿನ ಸಂಸತ್ ನಡೆಯನ್ನು ಭಾರತ ಸರ್ಕಾರ ಸ್ವಾಗತಿಸಿದೆ.
ಸಂವಿಧಾನದಲ್ಲಿ ಕೆಲವು ಬದಲಾವಣೆಗಾಗಿ ತಿದ್ದುಪಡಿ ತಂದಿರುವುದನ್ನು ಸಕಾರಾತ್ಮಕ ಬೆಳವಣಿಗೆ ಎಂದಿರುವ ಭಾರತ, ನೇಪಾಳದ ನಡೆಯನ್ನು ಸ್ವಾಗತಿಸುವುದಾಗಿ ಹೇಳಿದೆ. ಕಳೆದ ಕೆಲ ತಿಂಗಳ ಹಿಂದೆ ಜಾರಿಗೆ ಬಂದಿದ್ದ ನೇಪಾಳ ಸಂವಿಧಾನದ ಹಲವು ಅಂಶಗಳನ್ನು ವಿರೋಧಿಸಿ ಮದೇಶಿ ಸಮುದಾಯದವರು ಸಂವಿಧಾನದಲ್ಲಿ ಕೆಲ ತಿದ್ದುಪಡಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು.
ಭಾರತದ ಗಡಿಯಲ್ಲಿರುವ ದಕ್ಷಿಣ ತರೈ ಭಾಗದಲ್ಲಿ ವಾಸವಾಗಿರುವ ಮದೇಶಿ ಪಕ್ಷಗಳು  ಪ್ರತಿಭಟನೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಭಾರತದಿಂದ ನೇಪಾಳಕ್ಕೆ ಪೂರೈಕೆಯಾಗಬೆಕಿದ್ದ ಸರಕುಗಳು ಗಡಿ ಭಾಗದಲ್ಲೇ ಸ್ಥಗಿತಗೊಂಡಿದ್ದವು. ಇದರಿಂದ ಭಾರತ- ನೇಪಾಳದ ನಡುವೆ ರಾಜತಾಂತ್ರಿಕ ಸಮಸ್ಯೆಯೂ ಎದುರಾಗಿತ್ತು. ಮದೇಶಿಗಳ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ನೇಪಾಳದ ಸಂಸತ್ ಎರಡು ತಿದ್ದುಪಡಿಗಳನ್ನು ಅಂಗೀಕರಿಸಿರುವುದನ್ನು ಭಾರತ ಸ್ವಾಗತಿಸಿದೆ. ಆದರೆ ಮದೇಶಿ ಸಮುದಾಯದ ಮಾತ್ರ ತಿದ್ದುಪಡಿಯನ್ನು ಒಪ್ಪಿಲ್ಲ ಎಂದು ಹೇಳಲಾಗುತ್ತಿದೆ. 

SCROLL FOR NEXT