ದೇಶ

ಫೆಬ್ರವರಿ 5ರವರೆಗೆ ಶಂಕಿತ 12 ಉಗ್ರರು ಎನ್ಐಎ ವಶಕ್ಕೆ

Mainashree

ನವದೆಹಲಿ: ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿದ್ದಾರೆ ಎಂಬ ಶಂಕೆ ಮೇರೆಗೆ ದೇಶಾದ್ಯಂತ ಬಂಧಿಸಿರುವ 12 ಮಂದಿ ಶಂಕಿತ ಉಗ್ರರನ್ನು ಎನ್ಐಎ ಅಧಿಕಾರಿಗಳು ನವದೆಹಲಿಯ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಬಿಗಿ ಭದ್ರತೆಯೊಂದಿಗೆ ಶಂಕಿತ ಉಗ್ರರನ್ನು ಎನ್ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ಇಂದು ಹಾಜರುಪಡಿಸಿದ್ದು, ಈ ವೇಳೆ ನ್ಯಾಯಾಲಯ ಫೆಬ್ರವರಿ 5ರವರೆಗೆ ಶಂಕಿತ ಉಗ್ರರನ್ನು ಎನ್ಐಎ ವಶಕ್ಕೆ ನೀಡಿದೆ.

ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆ ಮುಖ್ಯ ಅತಿಥಿಯಾಗಿ ಫ್ರಾನ್ಸ್ ಅಧ್ಯಕ್ಷ ಹೊಲಾಂಡೆ ಅವರು ದೇಶಕ್ಕೆ ಆಗಮಿಸಿದ್ದು, ಹೊಲಾಂಡೆ ಅವರ ಆಗಮನ ವಿರೋಧಿಸಿ ದೇಶಾದ್ಯಂತ ದಾಳಿ ಸಂಚು ರೂಪಿಸಿದ್ದಾರೆಂಬ ಆರೋಪದ ಮೇಲೆ ಉಗ್ರರನ್ನು ಎನ್ಐಎ ಮಾರ್ಗದರ್ಶನದಲ್ಲಿ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದರು.

ಕರ್ನಾಟಕ, ಹೈದರಾಬಾದ್, ಮುಂಬೈನಲ್ಲಿ ಕಾರ್ಯಾಚರಣೆ ಕೈಗೊಂಡಿದ್ದ ಎಸ್ಐಟಿ ಅಧಿಕಾರಿಗಳು, ಕರ್ನಾಟಕದಿಂದ 6, ಹೈದರಾಬಾದ್ ನಿಂದ 4 ಹಾಗೂ ಮುಂಬೈನಲ್ಲಿ ಓರ್ವ ಸಂಕಿತ ಉಗ್ರರನ್ನು ಬಂಧಿಸಿದ್ದರು.

SCROLL FOR NEXT