ನವದೆಹಲಿ: ತನ್ನ ಅಪ್ರಾಪ್ತ ಮಗಳ ಮೇಲೆ ಪೊಲೀಸರು ಪದೇಪದೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಮಾಜಿ ಸೈನಿಕರೊಬ್ಬರು ಹರಿಯಾಣ ಸಚಿವಾಲಯದ ಮುಂದೆ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆ ಬುಧವಾರ ನಡೆದಿದೆ.
ಸೋನಿಪತ್ ಪೊಲೀಸ್ ಠಾಣೆಯ ಪೊಲೀಸರು ತನ್ನ ಮಗಳ ಮೇಲೆ ಪದೇಪದೆ ಅತ್ಯಾಚಾರ ಎಸಗಿದ್ದಾರೆ ಎಂದು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೊಲೀಸರಿಗೆ ಪತ್ತೆಯಾದ ಡೆತ್‌ನೋಟ್‌ನಲ್ಲಿ ಸಿಸೋಣ ಗ್ರಾಮದ ಮಾಜಿ ಸೈನಿಕ, ಘಟನೆಗೆ ತನ್ನ ಪತ್ನಿ ಹಾಗೂ ಖರ್ಖೊಡಾ ಪೊಲೀಸ್ ಅಧಿಕಾರಿಗಳನ್ನು ದೂರಿದ್ದಾರೆ.
ತಮ್ಮ ಮನೆಗೆ ಬರುತ್ತಿದ್ದ ಪೊಲೀಸ್ ಅಧಿಕಾರಿಗಳು ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗುತ್ತಿದ್ದರು ಎಂದು ಮಾಜಿ ಸೈನಿಕ ಡೆತ್‌ನೋಟ್‌ನಲ್ಲಿ ಆರೋಪಿಸಿದ್ದಾರೆ.