ಬಿಜಿತಾ ನಾಥ್ 
ದೇಶ

ಗಣರಾಜ್ಯೋತ್ಸವದಂದು ಸ್ವಾತಂತ್ರ್ಯ ದಿನಾಚರಣೆ ಶುಭಾಶಯ ಕೋರಿದ ಸಚಿವೆ

ಸಚಿವೆ ಬಿಜಿತಾ ನಾಥ್ ತ್ರಿಪುರಾದ ಧರ್ಮ ನಗರದ ಬಿಬಿಐ ಮೈದಾನದಲ್ಲಿ ಹಮ್ಮಿಕೊಂಡಿದ್ದ 67 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ಜನತೆಗೆ ಸ್ವಾತಂತ್ರ್ಯ ದಿನಾಚರಣೆ ಶುಭಾಶಯ ಹೇಳಿದರೆಂದು...

ತ್ರಿಪುರಾ: ಯಾವುದೇ ಅಡಚಣೆಗಳಿಲ್ಲದೇ ದೇಶಾದ್ಯಂತ 67 ನೇ ಗಣ ರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಆದರೆ ಗಣರಾಜ್ಯೋತ್ಸವ ದಿನದಂದು ಸ್ವಾತಂತ್ರ್ಯ ದಿನಾಚರಣೆ ಶುಭಾಶಯ ಕೋರಿ ಮಣಿಪುರದ ಸಚಿವೆ ಯಡವಟ್ಟು ಮಾಡಿದ್ದಾರೆ.

ಸಚಿವೆ ಬಿಜಿತಾ ನಾಥ್ ತ್ರಿಪುರಾದ ಧರ್ಮ ನಗರದ ಬಿಬಿಐ ಮೈದಾನದಲ್ಲಿ ಹಮ್ಮಿಕೊಂಡಿದ್ದ 67 ನೇ ಗಣರಾಜ್ಯಾತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ಜನತೆಗೆ ಸ್ವಾತಂತ್ರ್ಯ ದಿನಾಚರಣೆ ಶುಭಾಶಯ ಹೇಳಿದರೆಂದು ವರದಿ ಮಾಡಲಾಗಿದೆ.

ಎಲ್ಲರಿಗೂ 67 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ದೇಶಕ್ಕಾಗಿ ಹೋರಾಟ ನಡೆಸಿ, ಅಪಾರ ಕೊಡುಗೆ ನೀಡಿರುವ ಎಲ್ಲಾ ನಾಯಕರನ್ನು ಈ ವೇಳೆ ನಾವು ಸ್ಮರಿಸಬೇಕು ಎಂದು ತಾವು ಬರೆದು ತಂದಿದ್ದ ಟಿಪ್ಪಣಿ ನೋಡಿ ಹೇಳಿದರು.

ಸಚಿವರು ಹಲವು ಬಾರಿ ಸ್ವಾತಂತ್ರ್ಯ ದಿನಾಚರಣೆ ಎಂದು ಹೇಳಿದರು. ಹಿಂದೊಮ್ಮೆ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮ ದಿನಾಚರಣೆಯನ್ನು ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಎಂದು ಹೇಳಿದ್ದರು.

ಇನ್ನು ಸಾಮಾನ್ಯ ಜ್ಞಾನ ಇಲ್ಲದವರು ಸಮಾಜ ಕಲ್ಯಾಣ ಮತ್ತು ಸಾಮಾಜಿಕ ಶಿಕ್ಷಣದಂತ ಖಾತೆಗಳನ್ನು ನಿರ್ವಹಿಸಬಾರದು ಎಂದು ಬಿಜೆಪಿ ಆಗ್ರಹಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೆಲವರಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗಿದೆ: 7.8ರಷ್ಟು GDP ಬೆಳವಣಿಗೆಯ ಟೀಕಾಕಾರರನ್ನು ಖಂಡಿಸಿದ ಪ್ರಧಾನಿ ಮೋದಿ!

ಏಷ್ಯಾಕಪ್ 2026: ಪಾಕಿಸ್ತಾನ ನೀಡಿದ ಅಲ್ಪಮೊತ್ತದ ರನ್ ಬೆನ್ನಟ್ಟಿ ಗೆದ್ದ ಭಾರತ

ತುಂಗಭದ್ರಾ ಜಲಾಶಯದ ಹೂಳು ತೆರವು ಸಾಧ್ಯವಿಲ್ಲದಿದ್ದರೆ ಸಮಾನಾಂತರ ಜಲಾಶಯ ನಿರ್ಮಿಸಿ: ರಾಜ್ಯ ಸರ್ಕಾರಕ್ಕೆ ಬಿ.ವೈ. ವಿಜಯೇಂದ್ರ ಆಗ್ರಹ!

ಏಷ್ಯಾಕಪ್ 2026: 3 ಡಕೌಟ್, ಪಾಕಿಸ್ತಾನವನ್ನು 55 ರನ್‌ಗಳಿಗೆ ಆಲೌಟ್ ಮಾಡಿದ ಭಾರತ, ಕಳಪೆ ದಾಖಲೆ ಸೃಷ್ಟಿ!

'ದುಡ್ಡಿನ ಧಿಮಾಕು.. ಕಾರಿಗೇ ಬೆಂಕಿ ಹಾಕಿ ಬಾ ಅಂತ ಹೇಳಿದ್ದೆ': ನಟ 'ಯಶ್' ತಾಯಿ ಪುಷ್ಪ ಅರುಣ್ ಕುಮಾರ್!