ಸಾಂದರ್ಭಿಕ ಚಿತ್ರ 
ದೇಶ

ಪ್ರಧಾನಿಯಿಂದ ಲೋಕಾರ್ಪಣೆಗೊಳ್ಳುವ ವಾರ ಮೊದಲೇ ಒಡಿಸ್ಸಾದ ಐಒಸಿಎಲ್ ನಲ್ಲಿ ಬೆಂಕಿ

ಇನ್ನೊಂದು ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆ ಗೊಳ್ಳುವ ಮೊದಲೇ ಒಡಿಸಾದ ಪರಾದೀಪ್ ನ ಐಒಸಿಎಲ್‌ ಘಟಕದಲ್ಲಿ ಬೆಂಕಿ ..

ಪರದೀಪ್:  ಇನ್ನೊಂದು ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆ ಗೊಳ್ಳುವ ಮೊದಲೇ ಒಡಿಸಾದ ಪರಾದೀಪ್ ನ ಐಒಸಿಎಲ್‌ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ.

ಸ್ಥಳಕ್ಕೆ ಆರು ಅಗ್ನಿ ಶಾಮಕ ದಳಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಬೆಂಕಿಯನ್ನು ಶಮನಗೊಳಿಸಲಾಗುತ್ತಿದೆ. ಇನ್ನೂ ಬೆಂಕಿ ಅವಘಡದಿಂದ  ಯಾವುದೇ ಅವಘಡ ಅಥವಾ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ ಎಂದು ಜಗಜೀತ್‌ಸಿಂಗ್‌ನಗರ ಎಎಸ್‌ಪಿ ಮದಬನಂದ ಸಾಹು ಹೇಳಿದ್ದಾರೆ.

ಘಟಕದ ಗೇಟ್ ನಂ.1ರ ಬಳಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಗೆ ಕಾರಣವಿನ್ನೂ ತಿಳಿದು ಬಂದಿಲ್ಲ. ಸುಮಾರು 35 ಸಾವಿರ ಕೋಟಿ ವೆಚ್ಚದಲ್ಲಿ ಪೂರ್ಣಗೊಂಡ ಈ ಯೋಜನೆಯನ್ನು ಫೆ.7ರಂದು ಪ್ರಧಾನಿ ದೇಶಕ್ಕೆ ಸಮರ್ಪಿಸಬೇಕಿತ್ತು. ಈ ಅವಘಡ ಸಂಭವಿಸಿರುವುದು ಆತಂಕ ಸೃಷ್ಟಿಸಿದೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿರುವಾಗಲೇ ಈ ಅವಘಡ ಸಂಭವಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮುಂಬೈ-ಅಹಮದಾಬಾದ್ ಮಾತ್ರವಲ್ಲ, ಭಾರತದಲ್ಲಿ 7000 ಕಿ.ಮೀ ಬುಲೆಟ್ ರೈಲು ಓಡಲಿದೆ: ಜಪಾನ್‌ನಲ್ಲಿ ಪ್ರಧಾನಿ ಮೋದಿ ಘೋಷಣೆ

ಹಿಂದೂ ಮಹಿಳೆಯರ ಮೇಲೆ '3 ಮಕ್ಕಳ ಸಿದ್ಧಾಂತ'ದ ಹೊರೆ ಹೇರಬೇಡಿ: RSS ಮುಖ್ಯಸ್ಥ ಮೋಹನ್ ಭಾಗವತ್‌ಗೆ ಓವೈಸಿ

ಡಿಸೆಂಬರ್‌ನಲ್ಲಿ ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ

ಭಾರತದ ಜಿಡಿಪಿ ಪ್ರಬಲ ಜಿಗಿತ: ಮೊದಲ ತ್ರೈಮಾಸಿಕದಲ್ಲಿ ಶೇ. 7.8 ರಷ್ಟು ಬೆಳವಣಿಗೆ

ವಿಶ್ವ ಚಾಂಪಿಯನ್‌ಶಿಪ್‌ನಿಂದ ಹೊರಬಿದ್ದ PV Sindhu: ಇಂಡೋನೇಷ್ಯಾದ ಶಟ್ಲರ್ ಕುಸುಮಾ ವಿರುದ್ಧ ಸೋಲು!

SCROLL FOR NEXT