ನರೇಂದ್ರ ಮೋದಿ 
ದೇಶ

ಖಾದಿ ದೇಶದ ಲಾಂಛನ: ಮನ್ ಕಿ ಬಾತ್ ನಲ್ಲಿ ಮೋದಿ

ದೇಶದ ಯುವ ಜನತೆಯ ಗುರುತಿನಂತಾಗಿರುವ ಖಾದಿ ಉದ್ಯಮ ಕೋಟ್ಯಾಂತರ ಜನರ ಬದುಕಿಗೆ ಆಧಾರವಾಗಿದ್ದು ಇನ್ನಷ್ಟು ಬೆಳೆಯಬೇಕಾಗಿದೆ...

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 2016ನೇ ವರ್ಷದ ಮೊದಲ ‘ಮನ್ ಕಿ ಬಾತ್’ ನಲ್ಲಿ ದೇಶವಾಸಿಗಳ ಮುಂದೆ ತಮ್ಮ ಮನದ ಮಾತುಗಳನ್ನು ಬಿಚ್ಚಿಟ್ಟರು.

ದೇಶಕ್ಕಾಗಿ ಪ್ರಾಣ ತೆತ್ತ ವೀರ ಯೋಧರಿಗೆ ನನ್ನ ನಮನಗಳು ಎಂದು ಹೇಳುವ ಮೂಲಕ ಮನ್ ಕಿ ಬಾತ್ ಆರಂಭಿಸಿದ ಅವರು, ಎಲ್ಲರೂ 2 ನಿಮಿಷ ಮೌನಾಚರಣೆ ಮಾಡುವ ಮೂಲಕ ಹುತಾತ್ಮರಿಗೆ ಶೃದ್ದಾಂಜಲಿ ಸಲ್ಲಿಸಲು ಕೋರಿದರು.

ಪ್ರತಿವರ್ಷ ಜನವರಿ 30 ರಂದು  ಮಹಾತ್ಮಗಾಂಧೀಜಿ ಅವರು ಹುತಾತ್ಮರಾದ ದಿನ  ವನ್ನು ಹುತಾತ್ಮರ ದಿನವನ್ನಾಗಿ  ಆಚರಿಸುತ್ತಿದ್ದೇವೆ. ಭಾರತದ ಸಮಗ್ರ ಉನ್ನತಿಯ ಕನಸನ್ನು ಗಾಂಧೀಜಿ ಅವರು ಕಂಡಿದ್ದರು. ಅವರ ಮಹದಾಸೆಯಾಗಿದ್ದ ಖಾದಿ ಬಳಕೆ ಇನ್ನಷ್ಟು ಉತ್ತೇಜನ ನೀಡಬೇಕಾಗಿದೆ. ದೇಶದ ಯುವ ಜನತೆಯ ಗುರುತಿನಂತಾಗಿರುವ ಖಾದಿ ಉದ್ಯಮ ಕೋಟ್ಯಾಂತರ ಜನರ ಬದುಕಿಗೆ ಆಧಾರವಾಗಿದ್ದು ಇನ್ನಷ್ಟು ಬೆಳೆಯಬೇಕಾಗಿದೆ.

ಚರಕ ತಮ್ಮ ಬದುಕಿನಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದೆ ಎಂಬುದಾಗಿ ಬಹಳಷ್ಟು ಮಂದಿ ನನಗೆ ಬರೆದಿದ್ದಾರೆ ಎಂದು ಹೇಳಿದ ಮೋದಿ, ಭಾರತದ ಸ್ವಾತಂತ್ರ್ಯ ‘ಖಾದಿ’ಯಲ್ಲಿ ಇದೆ, ಭಾರತದ ನಾಗರಿಕತೆ ಖಾದಿಯನ್ನು ಪ್ರತಿನಿಧಿಸುತ್ತದೆ ಎಂದು ಸರ್ದಾರ್ ವಲ್ಲಭ ಭಾಯಿ ಪಟೇಲ್ ಹೇಳಿದ್ದರು ಎಂದು ಸ್ಮರಿಸಿದರು.

ತೊಂದರೆಯಲ್ಲಿ ಸಿಲುಕಿದ ರೈತರಿಗೆ ಪರಿಹಾರ ಒದಗಿಸುವ ಏಕೈಕ ಮಾರ್ಗ ಬೆಳೆ ವಿಮಾ ಯೋಜನೆ. ಆದಷ್ಟು ಹೆಚ್ಚು ರೈತರನ್ನು ಬೆಳೆ ವಿಮಾ ಯೋಜನೆಯ ವ್ಯಾಪ್ತಿಗೆ ತರೋಣ. ನಮ್ಮ ರೈತರ ಹೆಸರಿನಲ್ಲಿ ಬಹಳಷ್ಟು ವಿಷಯಗಳನ್ನು ಹೇಳಲಾಗುತ್ತದೆ. ಆದರೆ ನಾನು ಈ ವಿವಾದದಲ್ಲಿ ಭಾಗಿಯಾಗಲು ಇಷ್ಟ ಪಡುವುದಿಲ್ಲ ಎಂದು ಮೋದಿ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

SCROLL FOR NEXT