ಮುಂಬೈ: ಚೀನಾದ ಬೀಜಿಂಗ್ ನಲ್ಲಿ ಕೆಲ ದಿನಗಳ ಹಿಂದೆ ತುರ್ತು ಪರಿಸ್ಥಿತಿ ಘೋಷಣೆಗೆ ಕಾರಣವಾಗಿದ್ದ ಹೊಗೆ ಮತ್ತು ದಟ್ಟ ಮಂಜು ಮುಂಬೈನಲ್ಲೂ ಕಾಣಿಸಿಕೊಂಡಿದೆ.
ಮುಂಬೈನ ದಿಯೋನಾರ್ ನ ತ್ಯಾಜ್ಯ ನಿರ್ವಹಣಾ ಕೇಂದ್ರದಲ್ಲಿ ಜ.28ರಂದು ಬೆಂಕಿ ಹಚ್ಚಲಾಗಿತ್ತು. ಇದರಿಂದಾಗಿ ಎದ್ದ ಹೊಗೆ ದೇವನಾರ್ ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆವರಿಸಿಕೊಂಡಿದೆ.
ಹೀಗಾಗಿ ಬೃಹನ್ಮುಂಬೈ ಮಹಾನಗರ ಪಾಲಿಕೆ ವತಿಯಿಂದ ನಡೆಸುವ 74 ಶಾಲೆಗಳಿಗೆ ಶುಕ್ರವಾರ ಮತ್ತು ಶನಿವಾರ ರಜೆ ಘೋಷಿಸಲಾಗಿತ್ತು. ಎಂವಾರ್ಡ್ ಎಂದೇ ಕರೆಯಲಾಗುವ ಚೆಂಬೂರ್, ದೇವನಾರ್, ತಿಲಕ್ ನಗರ, ಪೆಸ್ತೋಂ ಸಾಗರ್, ಶಿವಾಜಿನಗರ, ಮಾನ್ ರ್ಖುದ್, ಬೈಗನ್ ವಾಡಿಗಳಲ್ಲಿನ ಪಾಲಿಕೆ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.